ಉಜ್ಜೈನಿ(ಮಧ್ಯಪ್ರದೇಶ):ಕೊರೊನಾ ಮಹಾಮಾರಿ ನಡುವೆ ಕೆನಡಾದ ಟೊರೊಂಟೊ ನಗರದ ಸಮೀಪದ ಬ್ರಹ್ಮಾತನ್ನಲ್ಲಿ ವಿಶಿಷ್ಟ ವಿವಾಹ ನಡೆದಿದೆ. ಸೇವಾಧಾಮ ಆಶ್ರಮದಲ್ಲಿ ಈ ವಿವಾಹ ನೆರವೇರಿದೆ.
ಈ ಮದುವೆ ಕಾರ್ಯಕ್ರಮದಲ್ಲಿ ವಧು ಹಾಗೂ ವರವಿನ ಕುಟುಂಬಸ್ಥರು ಭಾಗಿಯಾಗಿರಲಿಲ್ಲ. ವಧುವಿನ ತಂದೆ ಫಿಲಿಪ್ಪಿನ್ಸ್ ನಿಂದ ಆಶೀರ್ವಾದ ನೀಡಿದ್ರೆ ವರನ ಪೋಷಕರು ದೆಹಲಿಯಿಂದ ವರ್ಚುಯಲ್ ಆಶೀರ್ವಾದ ಮಾಡಿದ್ದಾರೆ. ಇಬ್ಬರು ಕೆನಡಾದ ಟೊರೊಂಟೊದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ಭವಿಷ್ಯ ನಿಧಿ, ಗ್ರ್ಯಾಚುಟಿ ಹಣದಿಂದ ಸಾವಿರಾರು ಜನರಿಗೆ ಊಟ: ನಿರುದ್ಯೋಗ ದಂಪತಿ ಮಹತ್ಕಾರ್ಯ
ಫಿಲಿಪ್ಪಿನ್ಸ್ ಹುಡುಗಿ ಜೆಲ್ಲಿ ನಾರ್ಸಿಕೊ ಹಾಗೂ ಭಾರತದ ಸಹರ್ಷ್ ಕೆನಡಾದಲ್ಲಿದ್ದು, ಅಲ್ಲಿ ಇಬ್ಬರ ನಡುವೆ ಸ್ನೇಹವಾಗಿದೆ. ತದನಂತರ ಅದು ಪ್ರೀತಿಯಾಗಿ ಬದಲಾಗಿದ್ದು, ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಇವರ ಮದುವೆ ಮಾಡಿಕೊಳ್ಳುವ ವಿಷಯ ಕುಟುಂಬಕ್ಕೆ ತಿಳಿಸಿದ್ದು, ಅದಕ್ಕೆ ಎರಡು ಕುಟುಂಬ ಒಪ್ಪಿಕೊಂಡ ಕಾರಣ ದೆಹಲಿಯಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆಸಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ ಕಾರಣ ಅದು ಸಾಧ್ಯವಾಗಿಲ್ಲ. ಹೀಗಾಗಿ ಬ್ರಹ್ಮತಾನ್ನ ಹಿಂದೂ ಸಭಾ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಅಲ್ಲಿನ ಸೇವಾಧಮ್ ಆಶ್ರಮದಲ್ಲಿ ವಾಸವಾಗಿದ್ದ 700 ಜನರಿಗೆ ಆಹಾರ ನೀಡಲಾಗಿದೆ.