ನವದೆಹಲಿ/ಕಲಬುರಗಿ: 2011ರ ಜನಗಣತಿಯ ಪ್ರಕಾರ ಕಲಬುರಗಿಯ ನಗರದ ಜನಸಂಖ್ಯೆ 533,587 ಆಗಿದ್ದು, ಪ್ರಸ್ತುತ ಜನಸಂಖ್ಯೆಯು 6.5 ಲಕ್ಷಕ್ಕಿಂತ ಹೆಚ್ಚಿದೆ. ಹೀಗಾಗಿ ಎಂಸಿಎಗಾಗಿ ಪ್ರಧಾನಮಂತ್ರಿ ಜನವಿಕಾಸ್ ಕಾರ್ಯಕ್ರಮ(ಪಿಎಂಜೆವಿಕೆ) ಅಡಿಯಲ್ಲಿ ಕಲಬುರಗಿ ಸಿಟಿ ಕಾರ್ಪೋರೇಶನ್ ಸೇರ್ಪಡೆ ಕುರಿತು ಸಂಸತ್ತಿನಲ್ಲಿ ಉಮೇಶ್ ಜಾಧವ್ ಧ್ವನಿ ಎತ್ತಿದರು.
ಸದನದಲ್ಲಿ ಉಮೇಶ್ ಜಾಧವ್ ಮಾತು ಸೋಮವಾರ ಸಂಸತ್ತಿನಲ್ಲಿ ಮಾತನಾಡಿದ ಕಲಬುರಗಿ ಬಿಜೆಪಿ ಸಂಸದ ಉಮೇಶ್ ಜಾಧವ್, ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿರುವ ಕಲಬುರಗಿ ಮಹಾನಗರ ಪಾಲಿಕೆಯನ್ನು ಪ್ರಧಾನಮಂತ್ರಿ ಜನವಿಕಾಸ್ ಕಾರ್ಯಕ್ರಮದ ಅಲ್ಪಸಂಖ್ಯಾತ ಕೇಂದ್ರಿಕೃತ ಪ್ರದೇಶ ಅಡಿಗೆ ಸೇರಿಸುವಂತೆ ಹಕ್ಕೋತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಕೋರ್ಟ್ನಿಂದ ತಡೆಯಾಜ್ಞೆ ತಂದಿರುವ ಆರು ಸಚಿವರು ರಾಜೀನಾಮೆ ನೀಡಲಿ: ಸಿದ್ದರಾಮಯ್ಯ ಆಗ್ರಹ
ಪ್ರಸ್ತುತ ಜನಸಂಖ್ಯೆ ಅಂದಾಜು 6.5 ಲಕ್ಷಕ್ಕಿಂತ ಹೆಚ್ಚು ಜನ ನಗರದಲ್ಲಿ ವಾಸವಿದ್ದಾರೆ. ಇದರಲ್ಲಿ ಶೇ.39% ರಷ್ಟು ಜನ ಸಂಖ್ಯೆ ಅಲ್ಪಸಂಖ್ಯಾತರಿದ್ದಾರೆ. ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮದಡಿ ಎಂಸಿಎಗಾಗಿ ಪ್ರಧಾನಮಂತ್ರಿ ಜನವಿಕಾಸ್ ಕಾರ್ಯಕ್ರಮ(ಪಿಎಂಜೆವಿಕೆ) ಅಡಿಯಲ್ಲಿ ಸೇರಿಸಲು ಶೇ. 25% ರಷ್ಟು ಅಲ್ಪಸಂಖ್ಯಾತರು ಇರಬೇಕು. ಆದರೆ ಕಲಬುರಗಿಯಲ್ಲಿ ನಿಗದಿತ ಮಾನದಂಡಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶೇ 39% ರಷ್ಟು ಅಲ್ಪಸಂಖ್ಯಾತರಿದ್ದಾರೆ ಎಂದರು.
ಪಿಎಂಜೆವಿಕೆ ಅಡಿಯ ಎಂಸಿಎನಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಸೇರಿಸಿದರೆ ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯ ಅಭಿವೃದ್ಧಿ ಹೆಚ್ಚಲಿದೆ. ಅಲ್ಪಸಂಖ್ಯಾತ ಸಮುದಾಯಗಳು, ಇತರೆ ಸಮುದಾಯಗಳ ಸಾಮಾಜಿಕ-ಆರ್ಥಿಕ ಮತ್ತು ಜೀವನ ಪರಿಸ್ಥಿತಿ ಸುಧಾರಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ ಎಂದಿದ್ದಾರೆ.