ಕರ್ನಾಟಕ

karnataka

ETV Bharat / bharat

ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದೆ ಸುಮಲತಾ ಅಂಬರೀಷ್​​ - ಲೋಕಸಭೆಯಲ್ಲಿ ಸುಮಲತಾ ಅಂಬರೀಷ್ ಪ್ರಶ್ನೆ

ಗಣಿಗಾರಿಕೆಯಲ್ಲಿ ಬಳಸಲ್ಪಡುವ ಸ್ಫೋಟಕಗಳು ಮತ್ತು ರಾಸಾಯನಿಕಗಳ ಕಾರಣದಿಂದ ಉಸಿರಾಟದ ಸಮಸ್ಯೆ, ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಸಂಸದೆ ಸುಮಲತಾ ಅಂಬರೀಶ್ ಲೋಕಸಭೆಯ ಗಮನ ಸೆಳೆದರು.

MP Sumalatha spoke mining issues in the parliament session
ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದೆ ಸುಮಲತಾ ಅಂಬರೀಷ್​​

By

Published : Aug 6, 2021, 2:15 PM IST

ನವದೆಹಲಿ:ಅಕ್ರಮ ಗಣಿಗಾರಿಕೆ ವಿರುದ್ಧ ಸತತವಾಗಿ ಧ್ವನಿಯೆತ್ತುತ್ತಿರುವ ಮಂಡ್ಯ ಸಂಸದೆ ಸುಮಲತಾ ಇಂದು ಲೋಕಸಭೆಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಮತ್ತು ಅಕ್ರಮ ಗಣಿಗಾರಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು.

ಲೋಕಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಷ್​​

ಗಣಿಗಾರಿಕೆಯಲ್ಲಿ ಬಳಸಲ್ಪಡುವ ಸ್ಫೋಟಕಗಳು ಮತ್ತು ರಾಸಾಯನಿಕಗಳ ಕಾರಣದಿಂದ ಜನರಿಗೆ ಉಸಿರಾಟದ ಸಮಸ್ಯೆ, ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಗಾಳಿಯ ಗುಣಮಟ್ಟ, ಅಂತರ್ಜಲ ಗುಣಮಟ್ಟವೂ ಕುಸಿಯುತ್ತಿದೆ ಎಂದು ಸುಮಲತಾ ಲೋಕಸಭೆಯಲ್ಲಿ ವಿವರಿಸಿದರು.

ಇದರ ಜೊತೆಗೆ ಬೆಳೆಗಳು ಕೂಡಾ ರಾಸಾಯನಿಕಗಳ ಕಾರಣದಿಂದ ಹಾಳಾಗುತ್ತಿವೆ. ಸರ್ಕಾರ ಈ ಅಕ್ರಮ ಗಣಿಗಾರಿಕೆ ತಡೆಯಲು, ಪರಿಸರವನ್ನು ಸಂರಕ್ಷಿಸಲು ಯಾವ ಯಾವ ಕ್ರಮಗಳನ್ನು ಕೈಗೊಂಡಿದೆ? ಎಂದು ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಸುಮಲತಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್, ದೇಶದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, 1114 ವಾಯುಮಾಲಿನ್ಯ ಮಾನಿಟರಿಂಗ್ ಸ್ಟೇಷನ್​ಗಳ ವ್ಯವಸ್ಥೆ ಮಾಡಲಾಗಿದೆ. ಸಂಸದೆಯ ಕ್ಷೇತ್ರದಲ್ಲೂ ವಾಯುಮಾಲಿನ್ಯ ಮಾನಿಟರಿಂಗ್ ಸ್ಟೇಷನ್ ಇದ್ದು, ಅದರಿಂದ ಮಾಹಿತಿ ಪಡೆದು ಉತ್ತರ ನೀಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ:ಮರು ನಾಮಕರಣ: ರಾಜೀವ್​ ಗಾಂಧಿ ಖೇಲ್ ರತ್ನ ಪ್ರಶಸ್ತಿ ಇನ್ನು ಮುಂದೆ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ'

ABOUT THE AUTHOR

...view details