ಬಾವಿಗೆ ಬಿದ್ದ ಮದುವೆ ಮೆರವಣಿಗೆ ವಾಹನ : 6 ಮಂದಿ ದುರ್ಮರಣ - marriage posession vehicle accident news
08:30 December 09
ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲಾ ವ್ಯಾಪ್ತಿಯಲ್ಲಿ ಮದುವೆ ಮೆರವಣಿಗೆ ವಾಹನ ಬಾವಿಗೆ ಬಿದ್ದು 6 ಜನರು ಸಾವಿಗೀಡಾಗಿದ್ದಾರೆ.
ಮಧ್ಯಪ್ರದೇಶ:ಛತ್ತರ್ಪುರ ಜಿಲ್ಲೆಯ ಮಹಾರಾಜಪುರದಲ್ಲಿ ಮದುವೆ ಮೆರವಣಿಗೆ ವಾಹನ ಬಾವಿಗೆ ಬಿದ್ದು 6 ಜನರು ಸಾವಿಗೀಡಾಗಿದ್ದಾರೆ.ಉಳಿದಂತೆ 3 ಜನರನ್ನು ಸುರಕ್ಷಿತವಾಗಿ ಮೇಲೆತ್ತಲಾಗಿದೆ.
ಮಹಾರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕುಟುಂಬವೊಂದರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಈ ಜನರು ಉತ್ತರ ಪ್ರದೇಶದ ಮಹೋಬಾದ ಸ್ವಾಸಾ ಗ್ರಾಮದಿಂದ ಮೆರವಣಿಗೆ ಬಂದಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರೇನ್ ಸಹಾಯದಿಂದ ಬಾವಿಗೆ ಬಿದ್ದಿದ್ದ ವಾಹನವನ್ನು ಮೇಲೆತ್ತಿ ಶವಗಳನ್ನು ಹೊರತೆಗೆದಿದ್ದಾರೆ. ಇನ್ನೂ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.