ಕೋಲ್ಕತ್ತಾ: 'ವಿದೇಶಗಳಲ್ಲಿ ತಿರುಗಾಡುತ್ತಾ ನಾನು ಬೆಂಗಾಲಿ ಹಾಡುಗಳನ್ನು ಹಾಡುತ್ತೇನೆ, ನನ್ನ ನಾಯಕಿ ಶೇಖ್ ಹಸೀನಾ, ಅವರು ಹೋಲಿಕೆಗೆ ಮೀರಿದವರು..' ಎಂದು ಸಂಸದೆ ಮುಮ್ತಾಜ್ ಬೇಗಂ ಕಿಕ್ಕಿರಿದ ಸದನದಲ್ಲಿ ಎದ್ದು ಅವರನ್ನು ಹಾಡಿ ಹೊಗಳಿದ್ದಾರೆ.
ಸದನದ ಅಧ್ಯಕ್ಷರಿಂದ ಹಿಡಿದು ಸಂಸದರವರೆಗೂ ಎಲ್ಲರೂ ಈ ಕ್ಷಣವನ್ನು ಆನಂದಿಸಿದ್ದಾರೆ ಜೊತೆಗೆ ಬಾಂಗ್ಲಾದೇಶ ಸಂಸತ್ತು ವಿಭಿನ್ನ ಘಟನೆಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಸಂಸತ್ತಿನ ಸದಸ್ಯರಾದ ಮಮತಾಜ್ ಬೇಗಂ ಅವರು ಹೊಸದಾಗಿ ಉದ್ಘಾಟನೆಗೊಂಡ ಪದ್ಮ ಸೇತುವೆಯ ಬಗ್ಗೆ ಶ್ಲಾಘನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ . ತಮ್ಮ ಪಕ್ಷದ ಮುಖ್ಯಸ್ಥೆ ಶೇಖ್ ಹಸೀನಾ ಅವರನ್ನು ಹಾಡುಗಳು ಮತ್ತು ಕವಿತೆಗಳ ಮೂಲಕ ಹೊಗಳಿದರು.