ಶಹದೋಲ್(ಮಧ್ಯ ಪ್ರದೇಶ): ಸ್ವಚ್ಛತೆಯ ಸಂದೇಶ ನೀಡಲು ಶಿಕ್ಷಕ ಬುಡಕಟ್ಟು ಜನಾಂಗದ ವಿದ್ಯಾರ್ಥಿನಿಯೊಬ್ಬಳ ಬಟ್ಟೆ ಕಳಚಿ ಅರೆಬೆತ್ತಲೆಯಾಗಿ ನಿಲ್ಲುವಂತೆ ಮಾಡಿದ್ದಾನೆ. ಕೊಳೆಯಾದ ಬಟ್ಟೆ ಧರಿಸಿ ಬಂದಿದ್ದ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕ ತೊಳೆದು ಶಾಲಾ ಮಕ್ಕಳಿಗೆ ಸ್ವಚ್ಛತೆಯ ಪಾಠ ಮಾಡಿದ್ದಾನೆ. ಈ ಬಗ್ಗೆ ತಮ್ಮ ವಿಭಾಗದ ಗ್ರೂಪ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಹದೋಲ್ ಜಿಲ್ಲೆಯ ಜೈಸಿಂಗ್ ನಗರದ ಜನಶಿಕ್ಷಾ ಕೇಂದ್ರ ಪೌರಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ಓದುತ್ತಿರುವ ಬಾಲಕಿ ಕೊಳಕು ಸಮವಸ್ತ್ರ ಧರಿಸಿ ಶಾಲೆಗೆ ಬಂದಿದ್ದಳು. ಇದನ್ನು ಕಂಡ ಶಿಕ್ಷಕ ಬಟ್ಟೆ ಬಿಚ್ಚಿಸಿ ಅದನ್ನು ತೊಳೆದು ಒಣಗಿದ ನಂತರ ತರಗತಿಗೆ ಬಿಟ್ಟು ಕೊಂಡಿದ್ದಾರೆ. ಬಟ್ಟೆ ತೊಳೆದು ಒಣಗುವವರೆಗೂ ವಿದ್ಯಾರ್ಥಿಯನ್ನು ಅರೆಬೆತ್ತಲೆಯಾಗಿ ನಿಲ್ಲಿಸಿದ್ದಾರೆ.