ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶದಲ್ಲಿ ಮಾರಾಮಾರಿ: ಪ್ರತ್ಯೇಕ ಘಟನೆಗಳಲ್ಲಿ 7 ಮಂದಿ ಸಾವು - Hoshangabad murder news

ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಕುಟುಂಬಗಳೆರಡರ ನಡುವೆ ಮಾರಾಮಾರಿ ನಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಹೊಶಂಗಾಬಾದ್ ಜಿಲ್ಲೆಯಲ್ಲಿ ತ್ರಿವಳಿ ಕೊಲೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

MP: Seven killed in attacks in Alirajpur, Hoshangabad districts
ಮಧ್ಯಪ್ರದೇಶದಲ್ಲಿ ಮಾರಾಮಾರಿ, ಕೊಲೆ: ಪ್ರತ್ಯೇಕ ಘಟನೆಗಳಲ್ಲಿ 7 ಮಂದಿ ಸಾವು

By

Published : Nov 5, 2021, 3:43 PM IST

ಭೋಪಾಲ್(ಮಧ್ಯಪ್ರದೇಶ): ಅಲಿರಾಜ್‌ಪುರ ಮತ್ತು ಹೊಶಂಗಾಬಾದ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಸುಮಾರು 7 ಮಂದಿ ಸಾವನ್ನಪ್ಪಿದ್ದಾರೆ.

ಗುರುವಾರ ರಾತ್ರಿ ಅಲಿರಾಜ್​ಪುರ ಜಿಲ್ಲೆಯ ಚಾಂದ್​ಪುರ ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಾಪ್ತಿಯಲ್ಲಿ ಬರುವ ಬೋಕ್ಡಿಯಾ ಗ್ರಾಮದ ಬೀಲ್ ಬುಡಕಟ್ಟು ಸಮುದಾಯದ ಎರಡು ಕುಟುಂಬಗಳ ಮಧ್ಯೆ ಹರಿತವಾದ ಆಯುಧಗಳು ಮತ್ತು ದೊಣ್ಣೆಗಳಿಂದ ಹೊಡೆದಾಟ ನಡೆದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಲಿರಾಜ್​ಪುರ ಪೊಲೀಸ್​ ವರಿಷ್ಠಾಧಿಕಾರಿ ಮನೋಜ್ ಕುಮಾರ್ ತಿಳಿಸಿದರು.

ಒಂದು ವರ್ಷದ ಹಿಂದೆ ಘರ್ಷಣೆಗೊಳಗಾದ ಎರಡು ಕುಟುಂಬಗಳಿಂದ ಪ್ರೀತಿಸುತ್ತಿದ್ದ ಜೋಡಿ ಗ್ರಾಮದಿಂದ ಪರಾರಿಯಾಗಿದ್ದರು. ಈ ವೇಳೆ ಯುವತಿ ತನ್ನ ಮನೆಯಿಂದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಳು. ಇದೇ ವಿಚಾರವಾಗಿ ಒಂದು ವರ್ಷದಿಂದ ಆಗಾಗ ಘರ್ಷಣೆಗಳು ನಡೆಯುತ್ತಿದ್ದವು. ಗುರುವಾರ ರಾತ್ರಿ ಇದೇ ವಿಚಾರವಾಗಿ ಮಾರಕಾಸ್ತ್ರಗಳಿಂದ ಗಲಾಟೆ ನಡೆದಿದ್ದು, ಯುವಕನ ಸಂಬಂಧಿಗಳಾದ ಸ್ಮೌಲ್ (25), ಸುಕ್ದೇವ್ (22) ಹಾಗೂ ಯುವತಿಯ ಅಜ್ಜ ಭಲ್​ಸಿಂಗ್ (50) ಮತ್ತು ಮತ್ತೊಬ್ಬ ಸಂಬಂಧಿ ನನ್ಬು ಸಾವನ್ನಪ್ಪಿದ್ದಾರೆ. ಇದೇ ವಿಚಾರವಾಗಿ ಎರಡು ದೂರುಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ತ್ರಿವಳಿ ಕೊಲೆ: ಗುರುವಾರ ರಾತ್ರಿ ಹೋಶಾಂಗಬಾದ್ ಜಿಲ್ಲೆಯ ಸಿಯೋನಿ ಮಾಳ್ವಾ ತೆಹಸಿಲ್​ನ ದುರ್ಗಾ ಕಾಲೋನಿಯಲ್ಲಿ ದಂಪತಿ ಹಾಗೂ ಅಪ್ರಾಪ್ತ ಮಗ ಸಾವನ್ನಪ್ಪಿದ್ದಾರೆ. ದೀಪಾವಳಿ ಹಬ್ಬದ ಆಚರಣೆಗೆ ಕುಟುಂಬ ಮನೆಯಿಂದ ಹೊರಗಡೆ ಬರದಿದ್ದಾಗ, ಸ್ಥಳೀಯರು ಮನೆಯೊಳಗೆ ನುಗ್ಗಿ ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ.

ಯೋಗೇಶ್ ನಾಮದೇವ್ (35), ಅವರ ಪತ್ನಿ ಸುನೀತಾ (32) ಮತ್ತು ಮಗ ದಿವ್ಯಾಾಂಶ್ (12) ಸಾವನ್ನಪ್ಪಿದವರಾಗಿದ್ದು, ಅವರ ದೇಹದ ಮೇಲೆ ಗಾಯದ ಗುರುತುಗಳ ಕಂಡು ಬಂದಿವೆ. ಮೇಲ್ನೋಟಕ್ಕೆ ದರೋಡೆಕೋರರರು ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ ಎಂದು ಸಿಯೋನಿ ಮಾಳ್ವಾ ಪೊಲೀಸ್ ಉಪವಿಭಾಗಾಧಿಕಾರಿ ಸೋಮ್ಯಾ ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ:ಬೈಕ್​​ನಲ್ಲಿ ಪಟಾಕಿ ಸಾಗಿಸುವಾಗ ಸಿಡಿದ ಕ್ರ್ಯಾಕರ್ಸ್​.. ತಂದೆ-ಮಗ ಸಜೀವದಹನ - Video

ABOUT THE AUTHOR

...view details