ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಬ್ರಿಜ್‌ಪುರ ಮೂಲದ ರೈತರಿಗೆ ಅದೃಷ್ಟ ಖುಲಾಯಿಸಿದೆ. ಸರ್ಕಾರದಿಂದ ಬಾಡಿಗೆ ಮೇಲೆ ಪಡೆದ ಲಾಲ್ಕಿಧೇರಿ ಪ್ರದೇಶದ ವಜ್ರದ ಗಣಿಯಲ್ಲಿ 3.21 ಕ್ಯಾರೆಟ್ ವಜ್ರ ದೊರೆತಿದೆ. ಇದನ್ನು ಪನ್ನಾದಲ್ಲಿರುವ ಸರ್ಕಾರಿ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿರುವ ರೈತ ರಾಜೇಂದ್ರ ಗುಪ್ತಾ, ಈ ವಜ್ರದಿಂದ ಪಡೆದುಕೊಳ್ಳುವ ಹಣವನ್ನು ಗಣಿಗಾರಿಕೆಯಲ್ಲಿ ತೊಡಗಿದ್ದ ಏಳು ಮಂದಿ ರೈತರು ಸಮಾನವಾಗಿ ಹಂಚಿಕೊಳ್ಳಲಿದ್ದೇವೆ. ವಜ್ರ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಭಾವಿಸುತ್ತೇವೆ. ಇದರಿಂದ ಬರುವ ಹಣದಲ್ಲಿ ಉದ್ಯಮ ಆರಂಭಿಸುವ ಯೋಜನೆ ಹಾಕಿಕೊಂಡಿದ್ದೇನೆಂದು ರೈತನೋರ್ವ ತಿಳಿಸಿದ್ದಾನೆ. ರತ್ನಶಾಸ್ತ್ರಜ್ಞರು ನೀಡಿದ ಮಾಹಿತಿ ಪ್ರಕಾರ, ಉತ್ಖನನದ ವೇಳೆ ದೊರೆತ ಈ ವಜ್ರವು ಉತ್ಕೃಷ್ಟ ದರ್ಜೆಯದಾಗಿದ್ದು, ಹೆಚ್ಚಿನ ಮೌಲ್ಯವನ್ನು ಹೊಂದಿದೆ ಎಂದಿದ್ದಾರೆ.
ಇದನ್ನೂ ಓದಿ:ಅಮೆರಿಕದಲ್ಲಿ ಮಿಂಚುತ್ತಿದೆ ಗುಜರಾತ್ನಲ್ಲಿ ತಯಾರಾದ ವಿಶ್ವದ ಅತಿ ದೊಡ್ಡ ವಜ್ರ