ಕರ್ನಾಟಕ

karnataka

ETV Bharat / bharat

ತೇಗದ ಮರಗಳನ್ನು ಕಡಿದಿದ್ದಕ್ಕಾಗಿ ಆರೋಪಿಗೆ 1.2 ಕೋಟಿ ರೂ ದಂಡ - Forest Department of Madhya Pradesh

ಬುಡಕಟ್ಟು ಯುವಕ ಎರಡು ಮರಗಳನ್ನು ಅಕ್ರಮವಾಗಿ ಕಡಿದಿದ್ದಕ್ಕಾಗಿ 1.20 ಕೋಟಿ ರೂ. ಗಳನ್ನು ಮಧ್ಯಪ್ರದೇಶದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ವಿಧಿಸಿದ್ದಾರೆ.

MP: Rs 1.2 crore fine imposed on man for felling teak trees
ತೇಗದ ಮರಗಳನ್ನು ಕಡಿದಿದ್ದಕ್ಕಾಗಿ ಆರೋಪಿಗೆ 1.2 ಕೋಟಿ ರೂ ದಂಡ

By

Published : Apr 29, 2021, 3:20 AM IST

ಸಿಲ್ವಾನಿ (ಮಧ್ಯಪ್ರದೇಶ):2021 ರ ಜನವರಿಯಲ್ಲಿ ಎರಡು ತೇಗದ ಮರಗಳನ್ನು ಅಕ್ರಮವಾಗಿ ಕತ್ತರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಅರಣ್ಯ ಉಲಾಖೆ ಅಧಿಕಾರಿಗಳು 1.20 ಕೋಟಿ ರೂ. ದಂಡ ವಿಧಿಸಲಾಗಿದೆ.

ಮರದ ಮೂಲ ವೆಚ್ಚದ ಜೊತೆಗೆ, ಮರದ ಪ್ರಯೋಜನಗಳನ್ನು ಸಹ ಲೆಕ್ಕಹಾಕಿ ದಂಡದ ಮೊತ್ತವನ್ನು ಆ ಆಧಾರದ ಮೇಲೆ ನಿರ್ಧರಿಸಲಾಗಿದೆ.

ಆರೋಪಿ

ಜನವರಿ 2021 ರಲ್ಲಿ, ಸಿಲ್ವಾನಿ ತಹಸಿಲ್‌ನ ಬಮ್‌ಹೋರಿ ಬಳಿಯ ವೆಲ್ಗಾಂವ್ ನಿವಾಸಿ ಆರೋಪಿ ಛೋಟೆ ಲಾಲ್ ಸಿಂಘೌರಿ ಅಭಯಾರಣ್ಯದಲ್ಲಿ ಎರಡು ತೇಗದ ಮರಗಳನ್ನು ಕಡಿದಿದ್ದಾರೆ ಎಂದು ಆರೋಪಿಸಲಾಗಿದೆ. ಅಂದಿನಿಂದ ಆರೋಪಿ ಪರಾರಿಯಾಗಿದ್ದ. 4 ತಿಂಗಳ ನಂತರ ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿ 1,21,07,700 ರೂ.ಗಳ ದಂಡವಿಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.

ಬಮ್ಹೌರಿ ಅರಣ್ಯ ಅಧಿಕಾರಿ ಮಹೇಂದ್ರ ಕುಮಾರ್ ಪಾಲೆಚಾ, ಅವರು ಪ್ರತಿಕ್ರಿಯಿಸಿದ್ದು, ಮರದ ಸರಾಸರಿ ವಯಸ್ಸು 50 ವರ್ಷಗಳು. ಈ 50 ವರ್ಷಗಳಲ್ಲಿ ಒಂದು ಮರವು 52,00,400 ರೂ. ಬೆಲೆ ಬಾಳುತ್ತದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details