ಕರ್ನಾಟಕ

karnataka

ETV Bharat / bharat

ಲವ್ ಜಿಹಾದ್ ನಿಷೇಧ ಕಾನೂನು ದೇಶಾದ್ಯಂತ ಜಾರಿಗೊಳಿಸಿ; ಸಾಧ್ವಿ ಪ್ರಗ್ಯಾ

ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಈಗಾಗಲೇ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಿವೆ. ಇಡೀ ದೇಶದಲ್ಲಿಯೇ ಈ ಕಾನೂನು ರೂಪಿಸಿ ಜಾರಿಗೆ ತರಬೇಕು ಎಂದು ಸಂಸದೆ ಪ್ರಗ್ಯಾ ಠಾಕೂರ್ ಆಗ್ರಹಿಸಿದ್ದಾರೆ.

pragya
ಸಾಧ್ವಿ ಪ್ರಗ್ಯಾ

By

Published : Jan 9, 2021, 12:32 PM IST

ರಾಜ್‌ಗಢ್ (ಮಧ್ಯಪ್ರದೇಶ): ಲವ್ ಜಿಹಾದ್ ವಿರುದ್ಧದ ಕಾನೂನು ಪರ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಮತ್ತೆ ಬ್ಯಾಟ್​ ಬೀಸಿದ್ದಾರೆ. ಇಡೀ ದೇಶದಲ್ಲಿಯೇ ಈ ಕಾನೂನು ರೂಪಿಸಿ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

"ವಿರೋಧ ಪಕ್ಷಗಳೇ ಈ ಸಮಸ್ಯೆಯನ್ನು ಸೃಷ್ಟಿಸಿವೆ. ಈ ಮೊದಲು ಲವ್ ಜಿಹಾದ್‌ನಂತಹ ಯಾವುದೇ ಕ್ರಮ ಇರಲಿಲ್ಲ. ಪ್ರೀತಿ ಅಂದರೆ ದೇವರು ಇದ್ದ ಹಾಗೆ. ಆದರೆ ಕೆಲವು ಅಪರಾಧಿಗಳು ಆ ಪ್ರೀತಿಯನ್ನು ಭ್ರಷ್ಟಗೊಳಿಸಿದ್ದಾರೆ. ಅಂತಹ ಜನರಿಗೆ ವಿಶೇಷ ಕಾನೂನುಗಳನ್ನು ರೂಪಿಸಲೇಬೇಕು ಹಾಗೂ ಅಂತವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಯಾಕೆಂದರೆ ಒಬ್ಬರ ನಮ್ರತೆಯನ್ನು ಕೊಲ್ಲುವುದು ಒಂದು ದೊಡ್ಡ ಅಪರಾಧವಾಗುತ್ತದೆ. ಅಂತಹ ಜನರು ಮುಕ್ತವಾಗಿ ವಿಹರಿಸುವುದು ಸೂಕ್ತವಲ್ಲ." ಎಂದು ಠಾಕೂರ್ ಹೇಳಿದರು.

ಇದನ್ನೂ ಓದಿ:'ಮೇಡ್ ಇನ್ ಇಂಡಿಯಾ' ಕೊರೊನಾ ಲಸಿಕೆಗಳೊಂದಿಗೆ ಜೀವಗಳನ್ನು ಉಳಿಸಲು ಭಾರತ ಸಿದ್ಧ: ಪಿಎಂ ಮೋದಿ

ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಈಗಾಗಲೇ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಿವೆ. ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರ ಅನುಮೋದನೆಯನ್ನು ಪಡೆದುಕೊಂಡಿದೆ ಎಂದು ಹೇಳಿದರು.

ABOUT THE AUTHOR

...view details