ಮಧ್ಯಪ್ರದೇಶ: ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಇತ್ತೀಚೆಗೆ ಆಪರೇಷನ್ ಕಮಲದಿಂದ ಕಾಂಗ್ರೆಸ್ ಕೈತಪ್ಪಿದ್ದ ಕ್ಷೇತ್ರಗಳು ಬಿಜೆಪಿಯತ್ತ ವಾಲುತ್ತಿವೆ.
ಮಧ್ಯಪ್ರದೇಶ ಉಪ ಸಮರ ಫಲಿತಾಂಶ: 28 ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿ ಮುನ್ನಡೆ, ಶಿವರಾಜ್ ಸಿಂಗ್ ಖುರ್ಚಿ ಸೇಫ್ - ಮಧ್ಯಪ್ರದೇಶ ಉಪ ಚುನಾವಣೆ 2020
ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಒಂದು ವೇಳೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸಿದರೆ ಶಿವರಾಜ್ ಚೌಹಾಣ್ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.
ಇಂದಿನ ಫಲಿತಾಂಶದ ಮೇಲೆ ಮಧ್ಯಪ್ರದೇಶ ಸರ್ಕಾರದ ಭವಿಷ್ಯ ನಿರ್ಣಯವಾಗಲಿದೆ. ಈ ಉಪ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಪ್ರತಿಷ್ಠೆಯಾಗಿದೆ. ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಸಿಂಧಿಯಾ ಬಣದ ಎಲ್ಲಾ ಶಾಸಕರು ಬಿಜೆಪಿ ಸೇರಿದ್ದರು.
ಮಧ್ಯಪ್ರದೇಶದಲ್ಲಿ ಒಟ್ಟು 28 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶ ಕೆಲ ಗಂಟಗಳಲ್ಲೇ ಹೊರಬೀಳಲಿದೆ. 230 ಸದಸ್ಯ ಬಲದ ವಿಧಾನಸಭೆಯಲ್ಲಿ 133 ಮ್ಯಾಜಿಕ್ ನಂಬರ್ ಪಡೆದು ಬಹುಮತ ಗಳಿಸಿದರೆ ಸರ್ಕಾರ ಸುಭದ್ರವಾಗಿರಲಿದೆ. ಸದ್ಯ ಬಿಜೆಪಿಗೆ ಸರ್ಕಾರ ರಚಿಸಲು 8 ಸ್ಥಾನಗಳ ಕೊರತೆಯಿದೆ. ಒಂದು ವೇಳೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸಿದರೆ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.