ಕರ್ನಾಟಕ

karnataka

ETV Bharat / bharat

ಅಸ್ವಾಭಾವಿಕ ಸೆಕ್ಸ್​: ಗಂಡನ ವಿರುದ್ಧ ದೂರು ದಾಖಲು ಮಾಡಿದ ಪತ್ನಿ! - ಮಧ್ಯಪ್ರದೇಶದ ಗ್ವಾಲಿಯಾರ್ ನ್ಯೂಸ್​

ಪತ್ನಿ ಜತೆ ಅನೈಸರ್ಗಿಕ ಸೆಕ್ಸ್​ ಮಾಡಿರುವ ಆರೋಪದ ಮೇಲೆ ಗಂಡನ ಬಂಧನ ಮಾಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Gwalior Crime news
Gwalior Crime news

By

Published : Feb 2, 2021, 8:37 PM IST

ಗ್ವಾಲಿಯಾರ್​(ಮಧ್ಯಪ್ರದೇಶ):ಮಧ್ಯಪ್ರದೇಶದ ಗ್ವಾಲಿಯಾರ್​ನಲ್ಲಿ ಮಹಿಳೆಯೊಬ್ಬಳು ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲು ಮಾಡಿದ್ದು, ಇದೀಗ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಗಿರ್ವಾಯ್ ಪೊಲೀಸ್ ಠಾಣೆ ಪ್ರದೇಶದಲ್ಲಿ 31 ವರ್ಷದ ಮಹಿಳಾ ನರ್ಸ್​​ 2019ರಲ್ಲಿ ಮೊದಲ ಗಂಡನಿಂದ ವಿಚ್ಛೇದನ ಪಡೆದುಕೊಂಡಿದ್ದಳು. ಇದಾದ ಬಳಿಕ ಆತನಿಂದ ಜೀವನ ನಿರ್ವಹಣೆಗಾಗಿ 25 ಲಕ್ಷ ರೂ ನಗದು ಮತ್ತು 5 ಲಕ್ಷ ರೂ. ಮೌಲ್ಯದ ಆಭರಣ ಪಡೆದುಕೊಂಡಿದ್ದಳು. ಇದಾದ ಬಳಿಕ ಮಹಿಳೆಯ ಜೀವನದಲ್ಲಿ ವಿನೋದ್​ ಎಂಬ ವ್ಯಕ್ತಿ ಆಗಮಿಸುತ್ತಾನೆ. ರೈಲ್ವೆ ಉದ್ಯೋಗಿಯಾಗಿದ್ದ ಈತ ಜನವರಿ 2020ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಗೆ ಪರಿಚಯವಾಗುತ್ತಾನೆ. ಜತೆಗೆ ಆಕೆಯನ್ನ ಮದುವೆ ಮಾಡಿಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದಾನೆ.

ಇದನ್ನೂ ಓದಿ: ಹಣಕ್ಕಾಗಿ ಪತಿಯನ್ನು ಕಿಡ್ನಾಪ್​ ಮಾಡಿದ ದುಷ್ಕರ್ಮಿಗಳು: ಠಾಣೆ ಮೆಟ್ಟಿಲೇರಿ ದುಂಬಾಲು ಬಿದ್ದ ಪತ್ನಿ!

ಇದಕ್ಕೆ ಎರಡು ಕುಟುಂಬದ ಸದಸ್ಯರು ಸಮ್ಮತಿ ಸೂಚಿಸಿದ್ದರಿಂದ 2020ರ ಜನವರಿ 26ರಂದು ವಿವಾಹವಾಗುತ್ತಾರೆ. ಮದುವೆಯಾದ ಬಳಿಕ ಮಹಿಳೆ ಜತೆ ಅನೈಸರ್ಗಿಕ ಲೈಂಗಿಕ ಸಂಬಂಧ ಬೆಳೆಸುತ್ತಿದ್ದನಂತೆ. ಇದರಿಂದ ಮಹಿಳೆ ಮೇಲಿಂದ ಮೇಲೆ ಚಿತ್ರಹಿಂಸೆ ಅನುಭವಿಸಿದ್ದಾಳೆ. ಇದಾದ ಬಳಿಕ ಮಹಿಳೆ ಹತ್ತಿರವಿದ್ದ ಹಣದಿಂದ ಮನೆ ಖರೀದಿ ಮಾಡುವುದಾಗಿ ಹೇಳಿ ಹಣ ಪಡೆದುಕೊಂಡಿದ್ದಾನೆ. ಜತೆಗೆ ಕಿರಿಯ ಸಹೋದರ ಅಮನ್​ಗೆ 60 ಸಾವಿರ ರೂ. ಕೊಡಿಸಿದ್ದಾರೆ.ಇದಕ್ಕೆ ವಿನೋದ್ ತಾಯಿ ಕೂಡ ಕುಮ್ಮಕ್ಕು ನೀಡಿದ್ದಾಳೆ.

ಇದಾದ ಬಳಿಕ ಪತ್ನಿಯನ್ನ ಕರೆದುಕೊಂಡು ಮುಂಬೈಗೆ ತೆರಳಿದ್ದಾನೆ. ಅಲ್ಲಿ ಗ್ರೂಪ್​ವೊಂದರಲ್ಲಿ ಸೇರಿಕೊಂಡಿದ್ದು, ಪತ್ನಿಯರನ್ನ ಬದಲಾವಣೆ ಮಾಡಿ ದೈಹಿಕ ಸಂಪರ್ಕ ಬೆಳೆಸುವ ವಿಷಯ ಬೆಳಕಿಗೆ ಬಂದಿದೆ. ಜತೆಗೆ ಮನೆ ಖರೀದಿ ಮಾಡಲು ಬ್ಯಾಂಕ್​ನಲ್ಲಿ ಸಾಲ ಪಡೆದಿರುವ ಮಾಹಿತಿ ಆಕೆಗೆ ಗೊತ್ತಾಗಿದೆ. ಹೀಗಾಗಿ ಪತಿ ವಿನೋದ್​, ಸಹೋದರ ಅಮನ್ ಹಾಗೂ ತಾಯಿ ವಿರುದ್ಧ ದೂರು ದಾಖಲು ಮಾಡಿದ್ದು, ಇದೀಗ ಆವರನ್ನ ಬಂಧನ ಮಾಡಲಾಗಿದೆ.

ABOUT THE AUTHOR

...view details