ವಿದಿಶಾ (ಮಧ್ಯಪ್ರದೇಶ) :ಚುನಾವಣಾ ಆಯೋಗ ಗ್ರಾಮ ಪಂಚಾಯತ್ನಲ್ಲಿ ಸ್ಪರ್ಧಿಸಬೇಕು ಎಂದರೆ 21 ವರ್ಷವನ್ನು ನಿಗದಿ ಮಾಡಿದೆ. ಇಲ್ಲೋರ್ವರು 21ನೇ ವಯಸ್ಸಲ್ಲೇ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ದಾಖಲೆ ಬರೆದಿದ್ದಾರೆ.
ಅನಿಲ್ ಎಂಬುವರು ವಿದಿಶಾದ ಸಿರೊಂಜ್ ತಹಸಿಲ್‌ನ ಗ್ರಾಮ ಪಂಚಾಯತ್‌ನ ಸರೆಖೋಹ್‌ನಿಂದ ಗೆದ್ದಿದ್ದಾರೆ. ನಾಮಪತ್ರದಲ್ಲಿ ಸಲ್ಲಿಕೆಯಾದ ಮಾಹಿತಿ ಪ್ರಕಾರ ಅನಿಲ್ ಅವರಿಗೆ 21 ವರ್ಷ ಮತ್ತು 6 ದಿನಗಳು. ಅನಿಲ್ ಬಿಜೆಪಿಯ ಯುವ ನಾಯಕರಾಗಿದ್ದು, ಬಿಜೆಪಿಯ ರಾಜ್ಯದ ಹಿರಿಯ ಶಾಸಕ ರಾಮೇಶ್ವರ್ ಶರ್ಮಾ ಅವರ ಸೋದರಳಿಯ ವಿವೇಕ್ ಶರ್ಮಾ ಅವರನ್ನು 12 ಮತಗಳಿಂದ ಸೋಲಿಸಿದ್ದಾರೆ. ಅನಿಲ್ ಯಾದವ್ ಒಟ್ಟು 562 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ವಿವೇಕ್ ಶರ್ಮಾ 550 ಮತಗಳನ್ನು ಪಡೆದಿದ್ದಾರೆ.
ಬಿಜೆಪಿಯ ಯುವ ಮುಖಂಡ ಅನಿಲ್ ಯಾದವ್ ಮಾಜಿ ಸಚಿವ ಲಕ್ಷ್ಮೀಕಾಂತ್ ಶರ್ಮಾ ಅವರ ಕಿರಿಯ ಸಹೋದರ ಶಾಸಕ ಉಮಾಕಾಂತ್ ಶರ್ಮಾ ಬಣದವರು. ಅವರು ತಮ್ಮ ಎದುರಾಳಿಯನ್ನು 12 ಮತಗಳಿಂದ ಸೋಲಿಸಿ ದೇಶದ ಮೊದಲ ಮತ್ತು ಅತಿ ಕಿರಿಯ ವಯಸ್ಸಿನ ಗ್ರಾಮ ಪಂಚಾಯತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.