ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶದಲ್ಲಿ ಗೆಳತಿಯನ್ನು ಮದುವೆಯಾಗಲು ಹಿಂದೂ ಧರ್ಮ ಸ್ವೀಕರಿಸಿದ ಮುಸ್ಲಿಂ ಯುವಕ

ಗೆಳತಿಯನ್ನು ವಿವಾಹವಾಗಲು ಮುಸ್ಲಿಂ ಧರ್ಮೀಯ ಯುವಕನೊಬ್ಬ ಹಿಂದೂ ಧರ್ಮ ಸ್ವೀಕರಿಸಿದ್ದಾನೆ.

ಹಿಂದೂ ಧರ್ಮವನ್ನು ಸ್ವೀಕರಿಸಿದ ಮುಸ್ಲಿಂ ಯುವಕ
ಹಿಂದೂ ಧರ್ಮವನ್ನು ಸ್ವೀಕರಿಸಿದ ಮುಸ್ಲಿಂ ಯುವಕ

By

Published : Jun 16, 2023, 10:59 PM IST

ನರಸಿಂಗ್‌ಪುರ (ಮಧ್ಯಪ್ರದೇಶ): ಫಾಜಿಲ್‌ ಖಾನ್‌ ಎಂಬ ಯುವಕ ತನ್ನ ಗೆಳತಿಯನ್ನು ಮದುವೆಯಾಗುವ ಸಲುವಾಗಿ ಹಿಂದೂ ಧರ್ಮ ಸ್ವೀಕರಿಸಿದ್ದು, ಅಮನ್‌ ರಾಯ್‌ ಆಗಿ ಹೆಸರು ಬದಲಾಯಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ನರಸಿಘಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಧಾರ್ಮಿಕ ಮತಾಂತರದ ನಂತರ ಅಮನ್ ತನ್ನ ಗೆಳತಿ ಸೋನಾಲಿಯನ್ನು ವಿವಾಹವಾಗಿದ್ದಾನೆ.

ಶ್ರೀರಾಮ ದೇವಸ್ಥಾನದಲ್ಲಿ ವಿವಾಹ: ಅಮನ್ ತಮ್ಮ ಹಿತೈಷಿಗಳು ಮತ್ತು ಪರಿಚಯಸ್ಥರ ಸಮ್ಮುಖದಲ್ಲಿ ಸೋನಾಲಿಯ ಹಣೆಯ ಮೇಲೆ ಸಿಂಧೂರ ಹಚ್ಚಿದ್ದಾನೆ. ಶ್ರೀರಾಮ ದೇವಸ್ಥಾನದಲ್ಲಿ ವಿವಾಹದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಯುವಕನನ್ನು ಹಿಂದೂ ಧರ್ಮಕ್ಕೆ ಸೇರಿಸುವ ಸಲುವಾಗಿ ಪುರೋಹಿತರಿಂದ ಪವಿತ್ರ ದಾರದ ಧೀಕ್ಷಾ ಸಮಾರಂಭ ಮತ್ತು ವೈದಿಕ ಆಚರಣೆಗಳು ನಡೆದವು.

ಇದನ್ನೂ ಓದಿ:Solar project: ಮಹಾರಾಷ್ಟ್ರದ ಪ್ರಸಿದ್ಧ ದೇವಸ್ಥಾನದ 1,150 ಎಕರೆ ಭೂಮಿಯಲ್ಲಿ ಸೌರಶಕ್ತಿ ಯೋಜನೆ: ಲಕ್ಷಾಂತರ ಆದಾಯ ನಿರೀಕ್ಷೆ

ಭಗವಂತನಿಗೆ ಪೂಜೆ ಸಲ್ಲಿಸುವುದನ್ನು ನಾನು ಇಷ್ಟಪಡುತ್ತೇನೆ: ಮದುವೆ ಸಮಾರಂಭ ಮುಗಿದ ನಂತರ ನವದಂಪತಿಗಳು ಸಂಭ್ರಮದಿಂದ ಕಂಡುಬಂದರು. ಶುಕ್ರವಾರ ಅಮಾನ್ ಆದ ಫಾಜಿಲ್, "ನಾನು ಬಾಲ್ಯದಿಂದಲೂ ಹಿಂದೂ ಧರ್ಮದತ್ತ ಆಕರ್ಷಿತನಾಗಿದ್ದೆ. ನನ್ನ ತಂದೆ ಹಿಂದೂ. ಆದರೆ, ನನ್ನ ತಾಯಿ ಮುಸ್ಲಿಂ ಎಂಬ ಕಾರಣಕ್ಕೆ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.

ನಾನು ಹಿಂದೂ ಸ್ನೇಹಿತರು ಮತ್ತು ಅವರ ಸಹವಾಸವನ್ನು ಆನಂದಿಸಲು ಇಷ್ಟಪಡುತ್ತೇನೆ. ನನ್ನ ಜೀವನದ ಆರಂಭದಿಂದಲೂ ದೇವಸ್ಥಾನಗಳಿಗೆ ಭೇಟಿ ನೀಡುವುದು ಮತ್ತು ಭಗವಂತನಿಗೆ ಪೂಜೆ ಸಲ್ಲಿಸುವುದನ್ನು ಇಷ್ಟಪಡುತ್ತೇನೆ'' ಎಂದಿದ್ದಾರೆ.

ಇದನ್ನೂ ಓದಿ:ತಿರುಪತಿ ಗೋವಿಂದರಾಜಸ್ವಾಮಿ ದೇಗುಲ ಸಮೀಪದ ಕಟ್ಟಡದಲ್ಲಿ ಭಾರಿ ಬೆಂಕಿ ಅನಾಹುತ; ಮೂವರು ಸಿಲುಕಿರುವ ಶಂಕೆ

ಹಿಂದೂ ಧರ್ಮದತ್ತ ಒಲವು ಹೊಂದಿದ್ದ ಯುವಕ: ಕಳೆದ ಮೂರ್ನಾಲ್ಕು ವರ್ಷಗಳಿಂದ ಯುವಕನನ್ನು ಪ್ರೀತಿಸುತ್ತಿದ್ದ ಸೋನಾಲಿ, "ನಾನು ಅವನನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ತಿಳಿದಿದ್ದೇನೆ. ಅಮನ್ ಕಾಳಜಿಯುಳ್ಳ ಸ್ವಭಾವದವನು. ನಾವು ಒಬ್ಬರಿಗೊಬ್ಬರು ತಿಳಿದಿದ್ದೇವೆ" ಎಂದು ಹೇಳಿದರು. ಮುಸ್ಲಿಂ ಯುವಕ ಕೆಲಸ ಮಾಡುತ್ತಿದ್ದ ರೆಸ್ಟೊರೆಂಟ್ ಮಾಲೀಕರು ಮಾತನಾಡಿ, "ಯುವಕ ಮೊದಲಿನಿಂದಲೂ ಹಿಂದೂ ಧರ್ಮದತ್ತ ಒಲವು ಹೊಂದಿದ್ದ. ಅವರ ಚಟುವಟಿಕೆಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ" ಎಂದು ಹೇಳಿದರು.

ಇದನ್ನೂ ಓದಿ:ಭಕ್ತಿ ಕವಿ ತುಳಸಿದಾಸರು ರಾಮಚರಿತ ಮಾನಸ ಕೃತಿಯನ್ನು ಮಸೀದಿಯೊಳಗೆ ಬರೆದಿದ್ದರು: ಆರ್​ಜೆಡಿ ಶಾಸಕನ ಹೇಳಿಕೆ

Prime ministers museum: ನೆಹರು ಸ್ಮಾರಕ ವಸ್ತು ಸಂಗ್ರಹಾಲಯ & ಗ್ರಂಥಾಲಯ ಸೊಸೈಟಿಯ ಹೆಸರು ಬದಲಿಸಿದ ಕೇಂದ್ರ ಸರ್ಕಾರ

ABOUT THE AUTHOR

...view details