ಕರ್ನಾಟಕ

karnataka

ETV Bharat / bharat

ಮಾಳಿಗೆ ಮೇಲೆ ಮಲಗಿದ್ದ ಅಜ್ಜ-ಅಜ್ಜಿ, ಮೊಮ್ಮಗಳ ಕೊಲೆ: ಮರಕ್ಕೆ ಮಹಿಳೆ ತಲೆ ನೇತುಹಾಕಿ ಹಂತಕರು ಪರಾರಿ! - hang womans head from tree

ಮಾಳಿಗೆ ಮೇಲೆ ಮಲಗಿದ್ದ ಮೂವರು ಕೊಲೆಯಾಗಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಮಂಡ್ಲಾ ಜಿಲ್ಲೆಯಲ್ಲಿ ತ್ರಿವಳಿ ಕೊಲೆ
triple murder in mandla

By

Published : May 17, 2022, 5:22 PM IST

ಮಂಡ್ಲಾ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಭಿಬತ್ಸ ಕೃತ್ಯವೊಂದು ಬೆಳಕಿಗೆ ಬಂದಿದೆ. ಮಂಡ್ಲಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು ವೃದ್ಧ ದಂಪತಿ ಹಾಗೂ ಇವರ 12 ವರ್ಷದ ಮೊಮ್ಮಗಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಇಲ್ಲಿನ ಪಟದೇಯಿ ಗ್ರಾಮದಲ್ಲಿ 62 ವರ್ಷದ ವ್ಯಕ್ತಿ, ಆತನ 57 ವರ್ಷ ಪತ್ನಿ ಮತ್ತು 12 ವರ್ಷದ ಮೊಮ್ಮಗಳು ಸೋಮವಾರ ರಾತ್ರಿ ಮನೆಯ ಮಾಳಿಗೆ ಮೇಲೆ ಮಲಗಿದ್ದರು. ಈ ವೇಳೆ ದುಷ್ಕರ್ಮಿಗಳು ಮೂವರ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಮಹಿಳೆಯ ತಲೆಯು ಮನೆಯಿಂದ ಒಂದು ಕಿ.ಮೀ. ದೂರದ ಹೊಲದಲ್ಲಿ ನೇಣು ಹಾಕಿರುವ ರೀತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮೊಹಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಅಲ್ಲದೇ, ಹಂತಕರ ಪತ್ತೆಯಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಹತ್ರಾಸ್​ನಲ್ಲಿ ಮತ್ತೊಂದು ರೇಪ್​.. ಅತ್ಯಾಚಾರ ಮಾಡಿ ಯುವತಿಯ ಕೈ- ಕಾಲು ಕಟ್ಟಿ ಪಕ್ಕದ ಮನೆಗೆ ಎಸೆದು ಕ್ರೌರ್ಯ

ABOUT THE AUTHOR

...view details