ಕರ್ನಾಟಕ

karnataka

ETV Bharat / bharat

ವ್ಯಾಕ್ಸಿನ್​ ಹಾಕಲು ತೆರಳಿದ್ದವರ ಮೇಲೆ ರಾಡ್​​, ಕತ್ತಿಯಿಂದ ಹಲ್ಲೆ... ವೈರಲ್​ ಆಯ್ತು ವಿಡಿಯೋ

ಕೊರೊನಾ ವ್ಯಾಕ್ಸಿನ್​ ಹಾಕಲು ತೆರಳಿದ್ದ ಕೆಲ ವೈದ್ಯಕೀಯ ಸಿಬ್ಬಂದಿ ಹಾಗೂ ತಹಶೀಲ್ದಾರ್ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

By

Published : May 25, 2021, 5:26 AM IST

Medical team attacked by villagers in Malikhedi
Medical team attacked by villagers in Malikhedi

ಭೋಪಾಲ್​(ಮಧ್ಯಪ್ರದೇಶ):ಕೋವಿಡ್​ ವ್ಯಾಕ್ಸಿನ್​ ಬಗ್ಗೆ ಈ ಹಿಂದಿನಿಂದಲೂ ಅನೇಕರು ಅಪಪ್ರಚಾರ ಮಾಡ್ತಿದ್ದು, ಇದೇ ಕಾರಣಕ್ಕಾಗಿ ಗ್ರಾಮೀಣ ಭಾಗಗಳಲ್ಲಿ ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಅಂತಹದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆಯ ಮಲಿಖೇಡಿ ಗ್ರಾಮದಲ್ಲಿ ಮಹಿಳಾ ತಹಶೀಲ್ದಾರ್​ ನೇತೃತ್ವದ ತಂಡ ವ್ಯಾಕ್ಸಿನ್​ ಹಾಕಲು ತೆರಳಿದ್ದ ವೇಳೆ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ವ್ಯಾಕ್ಸಿನ್​ ಹಾಕಲು ತೆರಳಿದ್ದವರ ಮೇಲೆ ರಾಡ್​​, ಕತ್ತಿಯಿಂದ ಹಲ್ಲೆ

ಈ ಹಿಂದೆ ಕೂಡ ಈ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಸೋಮವಾರ ವೈದ್ಯಕೀಯ ತಂಡ ಮತ್ತೊಮ್ಮೆ ಗ್ರಾಮಕ್ಕೆ ತೆರಳಿ ಅಲ್ಲಿನ ಜನರ ಮನವೊಲಿಕೆ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಈ ವೇಳೆ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ಮದ್ಯಪಾನ ಮಾಡಲು ಸಿಗದ ಅವಕಾಶ: ಢಾಬಾ ಧ್ವಂಸಗೊಳಿಸಿ, ಸಿಬ್ಬಂದಿ ಅಪಹರಣ

ವೈದ್ಯಕೀಯ ತಂಡದಲ್ಲಿ ತಹಶೀಲ್ದಾರ್​, ಗ್ರಾಮ ಪಂಚಾಯ್ತಿ ಅಧಿಕಾರಿ, ಆಶಾ ಕಾರ್ಯಕರ್ತೆ, ನರ್ಸ್​​​ ಹಾಗೂ ಸ್ಥಳೀಯ ಪಂಚಾಯ್ತಿ ಸದಸ್ಯರು ಇದ್ದರು ಎಂದು ತಿಳಿದು ಬಂದಿದೆ. ಅಲ್ಲಿನ ಜನರಿಗೆ ಮನವರಿಕೆ ಮಾಡಲು ಮುಂದಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ 50 ಜನರ ಗುಂಪು ಕೈಯಲ್ಲಿ ರಾಡ್​ ಹಾಗೂ ಕತ್ತಿ ಹಿಡಿದು ಬೆದರಿಕೆ ಹಾಕಿದ್ದಾರೆ. ಈ ವೇಳೆ ಹಲ್ಲೆ ಸಹ ನಡೆಸಲಾಗಿದ್ದು ಪರಿಣಾಮ ಗ್ರಾಮ ಪಂಚಾಯ್ತಿ ಮಹಿಳಾ ಅಧಿಕಾರಿ ತಲೆಗೆ ಗಾಯವಾಗಿದೆ. ಹೀಗಾಗಿ ಅವರು ಸ್ಥಳದಿಂದ ತೆರಳಿದ್ದಾರೆ ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಎಸ್​​ಪಿ ಆಕಾಶ್​ ಬುರೈ, ಪ್ರಕರಣ ದಾಖಲಾಗಿದ್ದು, ದಾಳಿ ಮಾಡಿರುವ ನಾಲ್ವರ ಬಂಧನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details