ಲೋಕಸಭೆ: ಇಂದಿನಿಂದ ಮುಂಗಾರು ಅಧಿವೇಶನ ಆರಂಭವಾಗಿದ್ದು, ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಿದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಮಂಗಳಾ ಸುರೇಶ್ ಅಂಗಡಿಯೂ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ.
ಇದೇ ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿರುವ ಮಂಗಳಾ, ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದರು.
ಲೋಕಸಭೆಯಲ್ಲಿ ಪದಗ್ರಹಣ ಸ್ವೀಕರಿಸಿದ ಸಂಸದೆ ಮಂಗಳಾ ಅಂಗಡಿ.. ಇದೇ ವೇಳೆ, ಆಂಧ್ರಪ್ರದೇಶದ ತಿರುಪತಿಯ ಮದ್ದಿಲ ಗುರುಮೂರ್ತಿ, ಕೇರಳದ ಮಲಪ್ಪುರಂ ಎಂ.ಪಿ.ಅಬ್ದು ಸಂಬಾದ್ ಮತ್ತು ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರದ ವಿಜಯ್ ವಸಂತ್ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಇದನ್ನೂ ಓದಿ:"ಪೆಗಾಸಸ್ ಸ್ಪೈವೇರ್ ಸಮಸ್ಯೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ": ಅಧೀರ್ ರಂಜನ್ ಚೌಧರಿ