ಕರ್ನಾಟಕ

karnataka

ETV Bharat / bharat

ಮಾನವ ಮುಖ, ಕಣ್ಣುಗಳನ್ನು ಹೋಲುವ ಮೇಕೆ ಮರಿ ಜನನ - ಮಧ್ಯಪ್ರದೇಶದ ಇಂದೋರ್‌

ಮಧ್ಯಪ್ರದೇಶದ ಇಂದೋರ್‌ನಲ್ಲಿ ಮೇಕೆಯೊಂದು ಮಾನವನ ಮುಖ ಹೋಲುವಂತಹ ಮೇಕೆ ಮರಿಯೊಂದಕ್ಕೆ ಜನ್ಮ ನೀಡಿದೆ.

indore goat born with human face and weird eyes
ಮಾನವ ಮುಖ, ಕಣ್ಣುಗಳನ್ನು ಹೋಲುವ ಮೇಕೆ ಮರಿ ಜನನ

By ETV Bharat Karnataka Team

Published : Dec 15, 2023, 9:38 AM IST

ಮಾನವ ಮುಖ, ಕಣ್ಣುಗಳನ್ನು ಹೋಲುವ ಮೇಕೆ ಮರಿ ಜನನ

ಇಂದೋರ್ (ಮಧ್ಯಪ್ರದೇಶ): ಇತ್ತೀಚಿಗೆ ನಗರದಲ್ಲಿ ಮೇಕೆ ಮರಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಾಸ್ತವವಾಗಿ ಈ ಮೇಕೆ ಮರಿಯ ತಲೆ ಮನುಷ್ಯನ ಮುಖವನ್ನು ಹೋಲುತ್ತದೆ. ಮೇಕೆ ಮರಿಗೆ ಮಾನವನಂತಿರುವ ಮುಖದಲ್ಲಿ ಎರಡು ಕಣ್ಣುಗಳಿವೆ. ಪ್ರಸ್ತುತ ಈ ಮರಿಯು ಸಂಪೂರ್ಣ ಆರೋಗ್ಯವಾಗಿದ್ದು, ಈ ಭಾಗದ ಅನೇಕ ಜನರು ಮೇಕೆ ಸಾಕಣೆದಾರರ ಅನ್ವರ್ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.

ಮಾನವನ ಮುಖ ಹೋಲುವಂತಹ ಮರಿಗೆ ಜನ್ಮ ನೀಡಿದ ಮೇಕೆ: ನಿಜವಾಗಿ ಇಂದೋರ್ ನ ಚಂದನ್ ನಗರದಲ್ಲಿ ವಾಸಿಸುತ್ತಿರುವ ಕುಟುಂಬದವರ ಮನೆಯಲ್ಲಿ ಮೇಕೆಯೊಂದು ಎರಡು ಮರಿಗಳಿಗೆ ಜನ್ಮ ನೀಡಿದೆ. ಹೌದು, ಮಾಲ್ವಿ ತಳಿಯ ಮೇಕೆ ಜನ್ಮ ನೀಡಿದ ಎರಡು ಮರಿಗಳಲ್ಲಿ ಒಂದು ಮೇಕೆಯ ತಲೆ ಮನುಷ್ಯನಂತೆ ಕಾಣುತ್ತಿದೆ. ಈ ಮೇಕೆಯ ಎರಡೂ ಕಣ್ಣುಗಳು ಒಂದೇ ಮುಂಭಾಗದಲ್ಲಿದ್ದು, ಅದರಿಂದಲೇ ಮರಿ ಎಲ್ಲ ನೋಡುತ್ತಿದೆ. ಮೇಲ್ನೋಟಕ್ಕೆ ಮೇಕೆಗೆ ಮಾನವ ಅಥವಾ ಕೋತಿಯ ಮುಖದಂತೆ ಇರುವುದು ಕಂಡು ಬರುತ್ತದೆ. ಅದರ ಎರಡೂ ಕಣ್ಣುಗಳು ಒಂದಕ್ಕೊಂದು ಅಂಟಿಕೊಂಡಂತೆ ಕಾಣಿಸುತ್ತಿದೆ. ಆದರೆ, ಈ ಮೇಕೆ ಮರಿ ಸಂಪೂರ್ಣವಾಗಿ ಆರೋಗ್ಯವಾಗಿದೆ. ಈ ಮೇಕೆ ಮರಿ ವೀಕ್ಷಿಸಿದ ಹಲವರಲ್ಲಿ ಅಚ್ಚರಿ ಮೂಡಿದೆ. ಜೊತೆಗೆ ಮರಿ ನೋಡಲು ಅನೇಕರು, ಚಂದನ್ ನಗರದಲ್ಲಿ ವಾಸಿಸುತ್ತಿರುವ ಅನ್ವರ್ ಮನೆಗೆ ಬರುತ್ತಿದ್ದಾರೆ.

ಮೇಕೆ ಮರಿಗೆ ರಾಣಿ ಎಂದು ಹೆಸರಿಟ್ಟ ಮಾಲೀಕ:ಅನ್ವರ್ ಖಾನ್ ಮೇಕೆ ಸಾಕಣೆ ಕೆಲಸ ಮಾಡುತ್ತಿದ್ದು, ಇದರೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಾನೆ. ಬುಧವಾರ ಬೆಳಗ್ಗೆ 6ಕ್ಕೆ ಅವರ ಮೇಕೆ ಎರಡು ಮರಿಗಳಿಗೆ ಜನ್ಮ ನೀಡಿದೆ. ಒಂದು ಮೇಕೆ ಮರಿ ಸಾಮಾನ್ಯವಾಗಿದ್ದರೆ, ಮತ್ತೊಂದು ಮೇಕೆ ಮುಖ ವಿಚಿತ್ರವಾಗಿದೆ. ಈ ಮೇಕೆ ಮರಿ ಕೋತಿ ಅಥವಾ ಮನುಷ್ಯನಂತೆ ಕಾಣುತ್ತದೆ ಮತ್ತು ಸಂಪೂರ್ಣವಾಗಿ ಆರೋಗ್ಯವಾಗಿದೆ. ಕುಟುಂಬದವರು ಈ ಮೇಕೆ ಮರಿಗೆ ರಾಣಿ ಎಂದು ಹೆಸರಿಡಲಾಗಿದೆ. ಮಧ್ಯಪ್ರದೇಶದಲ್ಲಿ ಈ ರೀತಿ ಮೇಕೆ ಮರಿ ಕಾಣಿಸಿಕೊಂಡಿದ್ದು, ಇದು ಎರಡನೇ ಬಾರಿ. ಈ ಹಿಂದೊಮ್ಮೆ ವಿದಿಶಾದಲ್ಲಿ ಮಾನವ ಮುಖವುಳ್ಳ ಮೇಕೆ ಮರಿ ಜನಿಸಿತ್ತು.

ಪ್ರತ್ಯೇಕ ಘಟನೆ, ಹಿಂದೆಯೂ ಮನುಷ್ಯನ ಮುಖ ಹೋಲುವ ಮರಿಗೆ ಜನ್ಮ ನೀಡಿದ್ದ ಮೇಕೆ:ಕೆಲವೊಮ್ಮೆ ವಿಚಿತ್ರ ಘಟನೆಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಅಸಹಜ ರೀತಿಯ ದೃಶ್ಯಗಳು ನಂಬಲು ಅಸಾಧ್ಯ ಎಂಬಂತೆ ಮಾಡುತ್ತವೆ. ಇದಕ್ಕೆ ನಿದರ್ಶನ ಎಂಬಂತೆ ಈ ಹಿಂದೆ, ಮಧ್ಯಪ್ರದೇಶದಲ್ಲಿ ಮೇಕೆಯೊಂದು ಮನುಷ್ಯನ ಮುಖ ಹೋಲುವಂತ ಮರಿಗೆ ಜನ್ಮ ನೀಡಿತ್ತು. ವಿದಿಶಾದ ಸಿರೊಂಜ್‌ನ ಸೆಮಲ್ಖೇಡಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಮರಿಯ ಸಂಪೂರ್ಣ ರೂಪ ಮಾನವನಂತೆ ಇತ್ತು. ಅಷ್ಟೇ ಏಕೆ? ಧ್ವನಿ ಕೂಡ ಮನುಷ್ಯನ ಧ್ವನಿಯಂತೆ ಇತ್ತು.

ಇದನ್ನೂ ಓದಿ:ಇಂದಿನಿಂದ ಬೆಂಗಳೂರಲ್ಲಿ 'ಕೇಕ್​ ಶೋ' ಆರಂಭ: ಸಂಸತ್ತಿನ ಸೊಬಗಿನಿಂದ ಹಿಡಿದು ಚಂದ್ರಯಾನ ಮಾದರಿ ಕೇಕ್​ ಪ್ರದರ್ಶನ

ABOUT THE AUTHOR

...view details