ಕರ್ನಾಟಕ

karnataka

ETV Bharat / bharat

ಕಟ್ಟಿಕೊಂಡ ಹೆಂಡ್ತಿಯನ್ನ 4 ವರ್ಷ ಕೊಠಡಿಯಲ್ಲಿ ಒತ್ತೆಯಾಳಾಗಿಟ್ಟ ಗಂಡ.. ನಿತ್ಯ ಚಿತ್ರಹಿಂಸೆ - ಹೆಂಡತಿಯನ್ನ ಕೊಠಡಿಯಲ್ಲಿ ಕೂಡಿ ಹಾಕಿದ ಗಂಡ

ಕಟ್ಟಿಕೊಂಡ ಹೆಂಡತಿ ಮಾನಸಿಕ ರೋಗಿ ಎಂದು ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Mandsaur Crime News
Mandsaur Crime News

By

Published : Jul 22, 2022, 9:19 PM IST

ಮಂಡಸೌರ್​(ಮಧ್ಯಪ್ರದೇಶ):ಕಟ್ಟಿಕೊಂಡ ಹೆಂಡತಿ ಮಾನಸಿಕ ರೋಗಿ ಎಂದು ಬರೋಬ್ಬರಿ 4 ವರ್ಷಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿರುವ ಗಂಡ, ಆಕೆಗೆ ಚಿತ್ರಹಿಂಸೆ ನೀಡಿದ್ದಾನೆ. ಮಧ್ಯಪ್ರದೇಶದ ಮಂದಸೌರ್​​ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಪಿಪ್ಲಿಯಾ ಕರಡಿಯಾ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ಪತ್ನಿ ಮಾನಸಿಕ ರೋಗಿ ಎಂದು ಶಂಕಿಸಿ, ಕೇವಲ 100 ಚದರ ಅಡಿ ವಿಸ್ತೀರ್ಣದ ಕೊಠಡಿಯಲ್ಲಿ 4 ವರ್ಷಗಳ ಕಾಲ ಬಂಧಿಸಿಟ್ಟಿದ್ದಾನೆ. ಇದರ ಜೊತೆಗೆ ಶೌಚಾಲಯಕ್ಕಾಗಿ ಕೊಠಡಿಯಲ್ಲೇ ಗುಂಡಿ ತೋಡಿದ್ದಾನೆ.

ಇದನ್ನೂ ಓದಿರಿ:ಟಿಎಂಸಿ ಸಚಿವರ ಸಹಾಯಕನ ಮನೆಯಲ್ಲಿ ₹20 ಕೋಟಿ ನಗದು.. ಮುಂದುವರಿದ ಶೋಧಕಾರ್ಯ

ನಿತ್ಯ ಹೆಂಡತಿಗೆ ಮಾನಸಿಕ ಚಿತ್ರಹಿಂಸೆ ನೀಡಿದ್ದು, ಸರಿಯಾಗಿ ಊಟ ಸಹ ನೀಡಿಲ್ವಂತೆ ಕೋಣೆಯಲ್ಲಿ ಲೈಟ್​ ಅಥವಾ ಫ್ಯಾನ್ ಇರದ ಕಾರಣ ಮಹಿಳೆ ನಾಲ್ಕು ವರ್ಷಗಳ ಕಾಲ ಕತ್ತಲ ಕೋಣೆಯಲ್ಲಿ ಸಮಯ ಕಳೆದಿದ್ದಾಳೆ. ಮಹಿಳೆ ಬಂಧಿಯಾಗಿರುವ ಬಗ್ಗೆ ಗ್ರಾಮಸ್ಥರು ಸಾಮಾಜಿಕ ಸಂಘಟನೆ ಆಯೋಜಕರಿಗೆ ಮಾಹಿತಿ ನೀಡಿದ್ದರು.

ಇದರ ಬೆನ್ನಲ್ಲೇ ಮಹಿಳಾ ಸಾಮಾಜಿಕ ಕಾರ್ಯಕರ್ತೆಯರು ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿ, ಆಕೆಯನ್ನ ಬಂಧಿಮುಕ್ತ ಮಾಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಮಹಿಳೆ 10ನೇ ತರಗತಿ ವ್ಯಾಸಂಗ ಮಾಡಿದ್ದು, ಇತರ ಮಹಿಳೆಯರಿಗೆ ಸಹಾಯ ಮಾಡಲು ಗುಂಪು ನಡೆಸುತ್ತಿದ್ದಳು. ಆದರೆ, ಇದು ಗಂಡನಿಗೆ ಇಷ್ಟವಿರಲಿಲ್ಲ. ಹೀಗಾಗಿ, ಆಕೆಯನ್ನ ಕೋಣೆಯಲ್ಲಿ ಕೂಡಿ ಹಾಕಿದ್ದಾನೆ.

ಕಳೆದ 17 ವರ್ಷಗಳ ಹಿಂದೆ ಯುವತಿ ಮದುವೆ ಮಾಡಿಕೊಂಡಿದ್ದು, ಇಬ್ಬರು ಮಕ್ಕಳಿದ್ದಾರೆ. ಸಂಬಂಧಿಕರು ಭೇಟಿಯಾಗಲು ಬಂದಾಗಲೆಲ್ಲ ಪತಿ ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಅವರಿಗೆ ಬೆದರಿಕೆ ಹಾಕಿ ಅಲ್ಲಿಂದ ಓಡಿಸುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.

ABOUT THE AUTHOR

...view details