ಭೋಪಾಲ್(ಮಧ್ಯಪ್ರದೇಶ): ಬಾಲಿವುಡ್ ನಟಿ ಸನ್ನಿ ಲಿಯೋನ್ಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಎಚ್ಚರಿಕೆಯನ್ನು ನೀಡಿದ್ದು, ಯೂಟ್ಯೂಬ್ನಿಂದ 'ಮಧುಬನ್ ಮೇ ರಾಧಿಕಾ ನಾಚೆ' ಹಾಡನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಹಾಡಿನ ಕುರಿತು ಸನ್ನಿ ಲಿಯೋನ್ ಕ್ಷಮೆಯಾಚಿಸಬೇಕು ಮತ್ತು ಮೂರು ದಿನಗಳಲ್ಲಿ ಹಾಡನ್ನು ತೆಗೆದುಹಾಕಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಲು ಸಿದ್ಧವಾಗಬೇಕು ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಕೆ ರವಾನಿಸಿದ್ದಾರೆ.
ಸನ್ನಿ ಲಿಯೋನ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹಿಂದೂಗಳು ರಾಧೆಯನ್ನು ಪೂಜಿಸುತ್ತಾರೆ ಮತ್ತು ಈ ಹಾಡು ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಹಾಡನ್ನು ತೆಗೆದುಹಾಕದಿದ್ದರೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳುವುದಾಗಿ ಸಚಿವ ಮಿಶ್ರಾ ಹೇಳಿದ್ದಾರೆ.
ಈಗ ವಿವಾದಕ್ಕೀಡಾಗಿರುವ ಹಾಡು 1960ರಲ್ಲಿ ಬಿಡುಗಡೆಯಾದ ಹಿಂದಿಯ 'ಕೋಹಿನೂರ್' ಸಿನಿಮಾದ ಹಾಡಾಗಿದೆ. ಈ ಹಾಡನ್ನು ಮಹಮ್ಮದ್ ರಫಿ ಹಾಡಿದ್ದಾರೆ. ಸದ್ಯಕ್ಕೆ ಇದನ್ನು ರಿಮಿಕ್ಸ್ ಮಾಡಿ ಆಲ್ಬಮ್ ಸಾಂಗ್ ತಯಾರಿಸಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:ದಕ್ಷಿಣ ಭಾರತದ ಲಂಗ-ದಾವಣಿ ತೊಟ್ಟು ತಿರುಪತಿಗೆ ಭೇಟಿ ನೀಡಿದ 'ಧಡಕ್' ಬೆಡಗಿ