ಕರ್ನಾಟಕ

karnataka

ETV Bharat / bharat

ಸಹೋದರನ ಜತೆಗಿನ ಜಗಳದಲ್ಲಿ ಮೊಬೈಲ್​ ನುಂಗಿದ ಹುಡುಗಿ; ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ - ಹೊಟ್ಟೆಯಲ್ಲಿ ಕೀಪ್ಯಾಡ್​ ಮೊಬೈಲ್​ ಪತ್ತೆ

ಮಧ್ಯಪ್ರದೇಶದಲ್ಲಿ ವಿಚಿತ್ರ ಘಟನೆ ನಡೆದಿದೆ. ಸಹೋದರನೊಂದಿಗೆ ಜಗಳದ ವೇಳೆ ಹುಡುಗಿಯೊಬ್ಬಳು ಕೀಪ್ಯಾಡ್​ ಮೊಬೈಲ್ ನುಂಗಿದ್ದಾಳೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದಿದ್ದಾರೆ.

ಮೊಬೈಲ್​ ನುಂಗಿದ ಹುಡುಗಿ
ಮೊಬೈಲ್​ ನುಂಗಿದ ಹುಡುಗಿ

By

Published : Apr 6, 2023, 9:05 AM IST

ಗ್ವಾಲಿಯರ್ (ಮಧ್ಯ ಪ್ರದೇಶ):ಪರೀಕ್ಷೆಯ ವೇಳೆ ಕೊಠಡಿ ಪರಿವೀಕ್ಷಕರಲ್ಲಿ ಸಿಕ್ಕಿಹಾಕಿಕೊಳ್ಳಬಾರದು ಅಂತಾ ರಹಸ್ಯವಾಗಿ ಬರೆದುಕೊಂಡು ಬಂದಿದ್ದ ಚೀಟಿಯನ್ನು ನುಂಗಿದ ಪ್ರಕರಣಗಳನ್ನು ನೋಡಿದ್ದೇವೆ. ಆದರೆ, ಇಲ್ಲೋರ್ವ ಹುಡುಗಿ ತನ್ನ ಸಹೋದರನೊಂದಿಗಿನ ಜಗಳದಲ್ಲಿ ಮೊಬೈಲ್ ಅನ್ನು ನುಂಗಿದ್ದಾಳೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಕಾಪಾಡಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಇದು ಎಲ್ಲರಲ್ಲೂ ಅಚ್ಚರಿ ಕೂಡ ಮೂಡಿಸಿದೆ.

ಆಗಿದ್ದೇನು?:ಗ್ವಾಲಿಯರ್‌ನ ಭಿಂಡ್ ಜಿಲ್ಲೆಯ ನಿವಾಸಿಯಾದ ಅನು ಎಂಬಾಕೆ ತನ್ನ ಸಹೋದರನೊಂದಿಗೆ ಮೊಬೈಲ್​​ಗಾಗಿ ಜಗಳವಾಡಿದ್ದಾಳೆ. ಮೊಬೈಲ್​ ತನಗೆ ಬೇಕು, ತನಗೆ ಬೇಕು ಎಂಬ ಗುದ್ದಾಟದಲ್ಲಿ ಕಸಿದುಕೊಂಡು ಅದನ್ನು ಗುಳುಂ ಮಾಡಿದ್ದಾಳೆ. ಕೆಲ ನಿಮಿಷಗಳ ಬಳಿಕ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಗ್ವಾಲಿಯರ್‌ನ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಸಂತ್ರಸ್ತೆಯನ್ನು ಆಸ್ಪತ್ರೆ ಸಿಬ್ಬಂದಿ ದಾಖಲಿಸಿಕೊಂಡು ಅಲ್ಟ್ರಾಸೌಂಡ್ ನಡೆಸಿದಾಗ, ಆಕೆಯ ಹೊಟ್ಟೆಯಲ್ಲಿ ಮೊಬೈಲ್​ ಇರುವುದು ಪತ್ತೆಯಾಗಿದೆ.

ವಿಚಿತ್ರ ಘಟನೆಯಿಂದ ವೈದ್ಯರು ಕೂಡ ಅಚ್ಚರಿಗೆ ಒಳಗಾಗಿ ತಕ್ಷಣವೇ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿದ್ದಾರೆ. 1 ಗಂಟೆಗೂ ಹೆಚ್ಚು ಕಾಲ ನಡೆದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ಆಕೆಯ ಹೊಟ್ಟೆಯಲ್ಲಿ ಸಿಲುಕಿಕೊಂಡಿದ್ದ ಮೊಬೈಲ್ ಅನ್ನು ಹೊರತೆಗೆದಿದ್ದಾರೆ.

ಓದಿ:ಬಿಟ್ ಕಾಯಿನ್ ಪ್ರಕರಣದ ಆರೋಪಿಯ ಸಹೋದರನಿಗೆ ಲುಕ್‌ಔಟ್ ನೋಟಿಸ್ ಹಿಂಪಡೆಯುವ ಕುರಿತು ಪರಿಶೀಲಿಸಲು ’ಇಡಿ’ಗೆ ಹೈಕೋರ್ಟ್ ಸೂಚನೆ

ಶಸ್ತ್ರಚಿಕಿತ್ಸಕರ ತಂಡದ ಭಾಗವಾಗಿದ್ದ ಜಿಆರ್‌ಎಂಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ನವೀನ್ ಕುಶ್ವಾಹ ಮಾತನಾಡಿ, ನಾವು ಮೊದಲ ಬಾರಿಗೆ ಮೊಬೈಲ್ ಫೋನ್ ಸೇವಿಸಿದ ಪ್ರಕರಣವನ್ನು ಎದುರಿಸಿದ್ದೇವೆ. ಮೊಬೈಲ್ ಹೊಟ್ಟೆಯಲ್ಲಿ ಸಿಲುಕಿಕೊಂಡಿತ್ತು. ಇದು ಅಪಾಯಕಾರಿ ಮತ್ತು ಸಂಕೀರ್ಣವಾದ ಕಾರ್ಯಾಚರಣೆಯಾಗಿತ್ತು. ಆದರೆ, ನಮ್ಮ ವೈದ್ಯರ ತಂಡವು ರೋಗಿಯ ಹೊಟ್ಟೆಯಿಂದ ಮೊಬೈಲ್ ಅನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಚಾರ್ಜ್ ಹಾಕಿದ್ದಾಗ ಮೊಬೈಲ್​ ಸ್ಫೋಟಗೊಂಡು ವ್ಯಕ್ತಿ ಸಾವು:ಕೆಲ ದಿನಗಳ ಹಿಂದೆ ಉಜ್ಜಯಿನಿ ಜಿಲ್ಲೆಯಲ್ಲಿ ಮೊಬೈಲ್​ ಸ್ಫೋಟಗೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ನಡೆದಿತ್ತು. ಜಮೀನಿನ ಕೋಣೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಚಾರ್ಜ್​ ಹಾಕಿದ್ದಾಗ ಸ್ಫೋಟಗೊಂಡ ತೀವ್ರತೆಗೆ ಸ್ವಿಚ್​ ಬೋರ್ಡ್​ ಕೂಡ ಹಾನಿಯಾಗಿತ್ತು.

ಮೃತ ವ್ಯಕ್ತಿ ರೈತರಾಗಿದ್ದು, ಜಮೀನಿನ ಮನೆಯಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಮೊಬೈಲ್​ ಸಿಡಿದು ಕುತ್ತಿಗೆ ಮತ್ತು ಎದೆಯ ಸುತ್ತ ಗಂಭೀರ ಸುಟ್ಟ ಗಾಯಗಳಾಗಿವೆ. ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಘಟನಾ ಸ್ಥಳದಲ್ಲಿ ಮೊಬೈಲ್​ ಫೋನ್ ಸಿಡಿದ ಕುರುಹುಗಳು ಲಭ್ಯವಾಗಿವೆ. ವಿದ್ಯುತ್​ ಪ್ಲಗ್​ಗಳಿಗೂ ಹಾನಿಯಾಗಿವೆ. ಮೊಬೈಲ್ ಸ್ಫೋಟದಿಂದಲೇ ವ್ಯಕ್ತಿ ಸಾವನ್ನಪ್ಪಿದ್ದಾಗಿ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಹೇಳಿದ್ದರು. ಸ್ಥಳದಲ್ಲಿ ಯಾವುದೇ ಬೇರೆ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ. ದಹಿಸುವ ವಸ್ತುಗಳೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದರು.

ಓದಿ:ಕೋಮುದ್ವೇಷ ಭಾಷಣ ಆರೋಪ: ಸಚಿವ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು

ABOUT THE AUTHOR

...view details