ಶಿಯೋಪುರ ( ಮಧ್ಯಪ್ರದೇಶ) : ಇಲ್ಲಿನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವನ್ನಪ್ಪಿದೆ. ಚೀತಾಗಳ ನಡುವೆ ನಡೆದ ಕಾದಾಟದಲ್ಲಿ ಹೆಣ್ಣು ಚಿರತೆ ಧೀರಾ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಮೂರು ತಿಂಗಳ ಅವಧಿಯಲ್ಲಿ ಕುನೋ ಪಾರ್ಕ್ನಲ್ಲಿ ಮೂರು ನಮೀಬಿಯನ್ ಚಿರತೆಗಳು ಸಾವನ್ನಪ್ಪಿವೆ.
ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಒಟ್ಟು 20 ಚಿರತೆಗಳನ್ನು ಭಾರತಕ್ಕೆ ತರಲಾಗಿತ್ತು. ಇದರಲ್ಲಿ ಮೂರು ಚೀತಾಗಳು ಸಾವನ್ನಪ್ಪುವ ಮೂಲಕ ಇದೀಗ 17 ಚೀತಾಗಳು ಮಾತ್ರ ಉಳಿದಿವೆ. ಈ ಹಿಂದೆ ಉದಯ್ ಮತ್ತು ಸಾಶಾ ಎಂಬ ಚೀತಾಗಳು ಸಾವನ್ನಪ್ಪಿದ್ದವು. ಉದಯ್ ಎಪ್ರಿಲ್ 23ರಂದು ಸಾವನ್ನಪ್ಪಿತ್ತು. ಕಿಡ್ನಿ ವೈಫಲ್ಯದಿಂದ ಚೀತಾ ಸಾವನ್ನಪ್ಪಿದೆ ಎಂದು ಮಂಗಳವಾರ ವರದಿ ಬಂದಿದೆ. ಮಾರ್ಚ್ 27ರಂದು ನಮೀಬಿಯಾದಿಂದ ತಂದಿದ್ದ ಸಾಶಾ ಎಂಬ ಚೀತಾ ಸಾವನ್ನಪ್ಪಿತ್ತು. ಈ ಚಿರತೆಯೂ ಮೂತ್ರ ಪಿಂಡದ ಸೋಂಕಿನಿಂದಾಗಿ ಸಾವನ್ನಪ್ಪಿತ್ತು.