ಕರ್ನಾಟಕ

karnataka

ETV Bharat / bharat

ಮಹಿಳೆಯ ಕಾಲಿಗೆ ನಮಸ್ಕರಿಸಿದ ಮಧ್ಯಪ್ರದೇಶ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್

ಜನಪರ ಮತ್ತು ಅತ್ಯಪರೂಪದ ನಡೆಯಿಂದಾಗಿ ಗುರುತಿಸಿಕೊಂಡಿರುವ ಮಧ್ಯಪ್ರದೇಶ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಮಹಿಳೆಯೊಬ್ಬರ ಕಾಲಿಗೆ ನಮಸ್ಕರಿಸಿ, ಮತ್ತೊಮ್ಮೆ ತಾವು ಅಪರೂಪದ ರಾಜಕಾರಣಿ ಎಂದು ಸಾಬೀತುಪಡಿಸಿದ್ದಾರೆ.

MP Energy Minster touching the feet of a vegetable vendor winning the hearts of people
ಮಹಿಳೆಯ ಕಾಲಿಗೆ ನಮಸ್ಕರಿಸಿದ ಮಧ್ಯಪ್ರದೇಶ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್

By

Published : Jan 14, 2022, 11:14 AM IST

ಗ್ವಾಲಿಯರ್, ಮಧ್ಯಪ್ರದೇಶ:ಅಪರೂಪದ ರಾಜಕಾರಣಿಗಳು ಅಲ್ಲಲ್ಲಿ ನಮಗೆ ಕಾಣಸಿಗುತ್ತಾರೆ. ಕೆಲವೊಮ್ಮೆ ಅವರ ನಡವಳಿಕೆ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತದೆ. ಮಧ್ಯಪ್ರದೇಶದ ಇಂಧನ ಸಚಿವರೂ ಕೂಡಾ ಇಂತಹ ಅಪರೂಪದ ರಾಜಕಾರಣಿಗಳ ಪಟ್ಟಿಗೆ ಸೇರುತ್ತಾರೆ.

ಗುರುವಾರ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಹಜಿರಾ ತರಕಾರಿ ಮಾರುಕಟ್ಟೆಗೆ ತೆರಳಿ, ಅಲ್ಲಿನ ಜನರ ಸಮಸ್ಯೆ ಅರಿಯಲು ಮುಂದಾಗಿದ್ದರು. ಈ ಮಾರುಕಟ್ಟೆಯ ಸ್ಥಳದಲ್ಲಿರುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದ ಕಾರಣದಿಂದಾಗಿ ಈ ಮಾರುಕಟ್ಟೆಯನ್ನು ಐಎನ್‌ಟಿಯುಸಿ ಮೈದಾನಕ್ಕೆ ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿತ್ತು.

ಮಹಿಳೆಯ ಕಾಲಿಗೆ ನಮಸ್ಕರಿಸಿದ ಮಧ್ಯಪ್ರದೇಶ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್

ಸ್ಥಳಾಂತರ ವಿರೋಧಿಸುತ್ತಿದ್ದ ಜನರ ಬಳಿಗೆ ತೆರಳಿದ ಅವರು ಜನರ ಕಷ್ಟವನ್ನು ಆಲಿಸಿದರು. ಈ ವೇಳೆ ಮಹಿಳೆಯೊಬ್ಬಳು 'ನಾನು ವಿಧವೆಯಾಗಿದ್ದು, ತರಕಾರಿ ಮಾರುವ ಮೂಲಕ ಜೀವನ ಸಾಗಿಸುತ್ತಿದ್ದೇನೆ. ಆದರೆ ಸರ್ಕಾರ ನನ್ನ ಅಂಗಡಿಯನ್ನು ತೆರವುಗೊಳಿಸಿದೆ' ಎಂದು ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಮುಂದೆ ಅಳಲು ತೋಡಿಕೊಂಡಳು.

ಈ ವೇಳೆ ಮಹಿಳೆಯ ದುಃಖವನ್ನು ಗಮನಿಸಿದ ಪ್ರದ್ಯುಮನ್ ಸಿಂಗ್ ತೋಮರ್ ಮಹಿಳೆಯ ಕಾಲುಗಳನ್ನು ಮುಟ್ಟಿ ನಮಸ್ಕರಿಸಿ, 'ನಾನು ನಿಮ್ಮ ಮಗನಂತೆ, ಏನಾದರೂ ತಪ್ಪು ಮಾಡಿದ್ದರೆ, ನೀವು ನನ್ನನ್ನು ಹೊಡೆಯಬಹುದು' ಎಂದು ಭಾವುಕರಾದರು. ನಂತರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದನ್ನು ಅಲ್ಲಿದ್ದವರು ಸಚಿವರ ಸರಳತೆ ಕಂಡು ಬೆರಗಾದರು.

ಪ್ರದ್ಯುಮನ್ ಸಿಂಗ್ ತೋಮರ್ ಇತ್ತೀಚೆಗೆ ಜನಪರ ಕಾರ್ಯಗಳಿಂದ ಹಾಗೂ ಅಪರೂಪದ ನಡೆಯಿಂದ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ:ಗುವಾಹಟಿ-ಬಿಕನೇರ್ ರೈಲು ದುರಂತ: 9 ಮಂದಿ ಸಾವು,42ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ABOUT THE AUTHOR

...view details