ಗ್ವಾಲಿಯಾರ್:ಮಧ್ಯಪ್ರದೇಶದ ಗ್ವಾಲಿಯರ್‌ನ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೋವಿಡ್ನಿಂದ ನಿಧನರಾದ ರೋಗಿಯ ಮೃತದೇಹವನ್ನು ಇತರ ಸೋಂಕಿತ ರೋಗಿಗಳ ಪಕ್ಕದಲ್ಲೇ ಇರಿಸಿರುವ ಘಟನೆ ಈಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಂಕಿತರ ಮಧ್ಯ ಕೋವಿಡ್ ರೋಗಿಯ ಶವ ಇಟ್ಟ ಆಸ್ಪತ್ರೆ ಸಿಬ್ಬಂದಿ ಮುರಾರ್‌ನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಕೋವಿಡ್ ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆದ್ರೆ ಆತನ ಶವವನ್ನು ಆಸ್ಪತ್ರೆ ಸಿಬ್ಬಂದಿ ಸಾಗಿಸದೆ 24 ಗಂಟೆಗಳ ಕಾಲ ಕೋವಿಡ್ ಸೋಂಕಿತರ ಬೆಡ್ಗಳ ಪಕ್ಕದಲ್ಲೇ ಬಿಟ್ಟಿದ್ದಾರೆ ಎಂದು ರೋಗಿಗಳ ಸಂಬಂಧಿಗಳು ಆರೋಪಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಆ ವ್ಯಕ್ತಿ ಕೋವಿಡ್ನಿಂದಾಗಿ ಮೃತಪಟ್ಟಿದ್ದಾನೆ. ಆದ್ರೆ ಆಸ್ಪತ್ರೆಯವರು ಆ ದೇಹವನ್ನು ಬೇರೆಡೆ ಸ್ಥಳಾಂತರಿಸದೆ ಸೋಂಕಿತರ ಬೆಡ್ಗಳ ಪಕ್ಕದ ಬೆಡ್ ಮೇಲೆಯೇ ಬಿಟ್ಟಿದ್ದಾರೆ ಎಂದು ಕೋವಿಡ್ ಸೋಂಕಿತರ ಸಂಬಂಧಿಗಳು ಆರೊಪಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಕಾಂಗ್ರೆಸ್ ಶಾಸಕ ಸತೀಶ್ ಸಿಕಾರ್ವಾರ್ ಹಸ್ತಕ್ಷೇಪದ ನಂತರ ಆಸ್ಪತ್ರೆಯ ಪ್ರಾಧಿಕಾರವು ಶವವನ್ನು ಸ್ಥಳಾಂತರಿಸಿತು. ಕೆಲವೇ ಕೆಲವು ಸಾಮಾನ್ಯ ಉದ್ಯೋಗಿಗಳು ಲಭ್ಯವಿರುವುದರಿಂದ ದೇಹವನ್ನು ತಡವಾಗಿ ತೆರವುಗೊಳಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.