ದಾಮೊಹ್ (ಮಧ್ಯಪ್ರದೇಶ) : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ರಾಜಾ ಪಟೇರಿಯಾ ಅವರನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಅವರು ಸೋಮವಾರದಂದು ಪನ್ನಾ ಜಿಲ್ಲೆಯ ತಹಸಿಲ್ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಭವಿಷ್ಯದಲ್ಲಿ ಸಂವಿಧಾನ, ಅಲ್ಪಸಂಖ್ಯಾತರು ಹಾಗು ದಲಿತರನ್ನ ಉಳಿಸಲು ಮೋದಿಯನ್ನು ಕೊಲ್ಲಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.