ಛಿಂದವಾಡಾ (ಮಧ್ಯ ಪ್ರದೇಶ) : ಜಿಲ್ಲೆಯ ರಾವಣವಾಡಾ ಠಾಣೆ ಪ್ರದೇಶದ ರಾವಣವಾಡಾ ಗ್ರಾಮವು ಪುರಾತನ ಧಾರ್ಮಿಕ ಐತಿಹ್ಯವನ್ನು ಹೊಂದಿದೆ. ಪುರಾತನ ನಂಬಿಕೆಯ ಪ್ರಕಾರ ತ್ರೇತಾಯುಗದಲ್ಲಿ ರಾವಣನು ಇಲ್ಲಿ ಭಗವಾನ್ ಶಿವನ ಪೂಜೆ ಮಾಡಿದ್ದನಂತೆ. ಅದೇ ಕಾರಣಕ್ಕೆ ಈ ಊರಿನ ಹೆಸರು ರಾವಣವಾಡಾ ಎಂದಾಗಿದೆ. ನೂರಾರು ವರ್ಷಗಳ ಹಿಂದೆ ಈ ಪ್ರದೇಶವು ಅತ್ಯಂತ ದಟ್ಟ ಕಾಡುಗಳಿಂದಾವೃತ್ತವಾಗಿತ್ತು. ಈ ಅರಣ್ಯದ ಮಧ್ಯದಲ್ಲಿ ರಾವಣನು ಶಿವನ ಪೂಜೆ ಮಾಡಿದ್ದ. ರಾವಣನ ಪೂಜೆಗೆ ಪ್ರಸನ್ನನಾದ ಭಗವಾನ್ ಶಿವ ಪ್ರತ್ಯಕ್ಷನಾಗಿ ಆಶೀರ್ವಾದ ಮಾಡಿದ್ದನಂತೆ.
ರಾವಣವಾಡಾ ಬಳಿ ಇವೆ ಮಹದೇವಪುರಿ ಮತ್ತು ವಿಷ್ಣುಪುರಿ: ರಾವಣವಾಡಕ್ಕೆ ಹೊಂದಿಕೊಂಡಂತೆ ವಿಷ್ಣುಪುರಿ ಮತ್ತು ಮಹದೇವಪುರಿ ಎಂಬ ಎರಡು ಗ್ರಾಮಗಳಿರುವುದರಿಂದ ಧಾರ್ಮಿಕ ಐತಿಹ್ಯದ ಬಗ್ಗೆ ಜನರ ನಂಬಿಕೆ ಮತ್ತೂ ಬಲವಾಗಿದೆ. ಒಂದೊಮ್ಮೆ ಇಲ್ಲಿ ವೆಸ್ಟರ್ನ್ ಕೋಲ್ ಫೀಲ್ಡ್ಸ್ ನ ಕಲ್ಲಿದ್ದಲು ಗಣಿಗಳಿದ್ದವು.
ಗ್ರಾಮದ ಆದಿವಾಸಿಗಳು ರಾವಣನನ್ನು ಆರಾಧ್ಯ ದೇವರೆಂದು ಪೂಜಿಸುತ್ತಾರೆ. ರಾವಣವಾಡದ ನಿವಾಸಿ ರಾಜೇಶ್ ಧುರ್ವೆ ಅವರು ತಮ್ಮ ಸ್ವಂತ ಜಮೀನಿನಲ್ಲಿಯೇ ರಾವಣ ದೇವನ ದೇವಾಲಯವಿದೆ ಎಂದು ಹೇಳುತ್ತಾರೆ. ರಾವಣನನ್ನು ಹಲವು ತಲೆಮಾರುಗಳಿಂದ ಇಲ್ಲಿ ಪೂಜಿಸಲಾಗುತ್ತಿದೆ.