ಛಿಂದ್ವಾರಾ (ಮಧ್ಯಪ್ರದೇಶ):ಮೂರು ತಿಂಗಳ ಹಿಂದೆ ಮಧ್ಯಪ್ರದೇಶದ ಛಿಂದ್‌ವಾರದ ಚಂದಂಗಾವ್‌ನಲ್ಲಿರುವ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕೇಸರಿ ನಂದನ್ ಸೂರ್ಯವಂಶಿ ಎಂಬುವವರ ಮನೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಮಗಳ ಜನನವು ಸ್ಮರಣೀಯವಾಗಿಸಲು ಏನಾದರೂ ಮಾಡಬೇಕು ಎಂದು ಕುಟುಂಬಸ್ಥರು ಯೋಚಿಸಿದ್ದರು.
ಇದಾದ ಬಳಿಕ ಯಾವುದೋ ಸುದ್ದಿ ವಾಹಿನಿಯಲ್ಲಿ ವಿಶ್ವ ದಾಖಲೆಗೆ ಸಂಬಂಧಿಸಿದ ಸುದ್ದಿ ಕೇಳಿದ್ದರು. ಆಮೇಲೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಅರ್ಜಿ ಹಾಕಿದ್ದರು. ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ಈಗಾಗಲೇ ಕಿರಿಯ ಮಗುವಿನ 28 ದಾಖಲೆಗಳನ್ನು ಹೊಂದಿರುವ ದಾಖಲೆ ಇದೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಇಲ್ಲಿರುವ ಈ ದಾಖಲೆಯನ್ನು ಮುರಿಯಲು ಯೋಚಿಸಿದ್ದರು. ವಿಶ್ವ ದಾಖಲೆಗಾಗಿ ತಮ್ಮ ಹೆಣ್ಣು ಮಗುವಿನ ದಾಖಲೆಗಳ ತಯಾರಿಕೆಯನ್ನು ಆರಂಭ ಮಾಡಿದ್ದಾರೆ. 72 ದಿನ ತುಂಬುದರೊಳಗೆ ಮಗಳಿಗೆ ಸಂಬಂಧಿಸಿದಂತೆ 31 ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ. ಪ್ರಸ್ತುತ ಈ ಪುಟ್ಟ ಬಾಲಕಿ ಶರಣ್ಯಾ ಸೂರ್ಯವಂಶಿ ಅವರ ಹೆಸರನ್ನು ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಿಸಲಾಗಿದೆ.
ದಾಖಲೆ ಮಾಡುವ ಆಲೋಚನೆ ಬಂದಿದ್ದು ಹೀಗೆ: ಶರಣ್ಯ ಸೂರ್ಯವಂಶಿ ಅವರ ತಾತ ಗೋಪಾಲ್ ಸೂರ್ಯವಂಶಿ, ತಂದೆ ಕೇಸರಿ ಸೂರ್ಯವಂಶಿ ಮತ್ತು ತಾಯಿ ಪ್ರಿಯಾಂಕಾ ಸೂರ್ಯವಂಶಿ, ಮೂವರೂ ಅಂಚೆ ಇಲಾಖೆಯಲ್ಲಿ ಉದ್ಯೋಗಿಗಳು. ''ಖಾತೆ ತೆರೆಯಲು ಮತ್ತು ಇತರ ಉದ್ದೇಶಗಳಿಗಾಗಿ ಹೆಚ್ಚಿನ ಜನರು ತಮ್ಮ ಬಳಿಗೆ ಬರುತ್ತಾರೆ. ಆದರೆ, ಆ ಜನರು ಯಾವಾಗಲೂ ದಾಖಲೆಗಳ ಕೊರತೆಯಿಂದ ಕಷ್ಟಪಡುತ್ತಾರೆ'' ಎಂದು ಶರಣ್ಯ ಅವರ ಕುಟುಂಬ ಸದಸ್ಯರು ಹೇಳುತ್ತಾರೆ. ಅವರು ತಮ್ಮ ಮಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಿದ್ಧಪಡಿಸಲು ಯೋಚಿಸಿದ್ದರು. ಆ ದಾಖಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಅವರು ನಿಗದಿತ ಸಮಯದೊಳಗೆ ದಾಖಲೆಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ತಿಳಿಸುತ್ತಾರೆ.