ಭೋಪಾಲ್:ಭೋಪಾಲ್ ಅನಿಲ ದುರಂತ ಸಂತ್ರಸ್ತರ ವಿಧವೆಯರಿಗೆ ತಿಂಗಳಿಗೆ 1,000 ರೂಪಾಯಿ ಹೆಚ್ಚುವರಿ ಪಿಂಚಣಿ ನೀಡಲು ಮಧ್ಯಪ್ರದೇಶ ಸಚಿವ ಸಂಪುಟ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಇದು ಭೋಪಾಲ್ ಅನಿಲ ಸೋರಿಕೆ ಸಂತ್ರಸ್ತರ ಬದುಕುಳಿದ ವಿಧವೆಯರಿಗೆ ಸಾಮಾಜಿಕ ಭದ್ರತಾ ಪಿಂಚಣಿಗೆ ಹೆಚ್ಚುವರಿಯಾಗಿರುತ್ತದೆ ಎಂದು ಸರ್ಕಾರ ತಿಳಿಸಿದೆ. ಈ ಮಹಿಳೆಯರಿಗೆ ಹೆಚ್ಚುವರಿಯಾಗಿ ಇಷ್ಟು ಹಣ ನೀಡುವ ಪ್ರಸ್ತಾಪಕ್ಕೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿದರೂ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದಿನ ಸಿಎಂ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ 2019ರಲ್ಲಿ ಹೆಚ್ಚುವರಿ ಪಿಂಚಣಿಯನ್ನು ನಿಲ್ಲಿಸಿತ್ತು ಎಂದು ಸರ್ಕಾರದ ವಕ್ತಾರ ಮಿಶ್ರಾ ಆರೋಪಿಸಿದರು. ಬಿಜೆಪಿ ಸರ್ಕಾರವು 2013ರಲ್ಲಿ ಪಿಂಚಣಿಯನ್ನು ಆರಂಭಿಸಿದೆ. ಮತ್ತು ಪ್ರಸ್ತುತ ಆಡಳಿತದಲ್ಲಿ ಈ ಸೌಲಭ್ಯವನ್ನು ಪುನರಾರಂಭಿಸಲು ನಿರ್ಧರಿಸಿದೆ ಎಂದರು.