ಬೇತುಲ್( ಮಧ್ಯಪ್ರದೇಶ); ಬೇತುಲ್ ಜಿಲ್ಲೆಯಲ್ಲಿ ಬೋರ್‌ವೆಲ್‌ಗೆ ಬಿದ್ದು 55 ಅಡಿ ಆಳದಲ್ಲಿ ಸಿಲುಕಿದ್ದ 8 ವರ್ಷದ ಮಗುವನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಬೇತುಲ್ ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
70 ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆ ಮಗುವನ್ನು ಕೊಳವೆ ಬಾವಿಯಿಂದ ಮೇಲೆ ಕರೆತರಲು ಯಶಸ್ವಿ ಆಗಿದೆ. ಆದರೆ ಮಗುವನ್ನು ಜೀವಂತವಾಗಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೋರ್‌ವೆಲ್‌ಗೆ ಸಮಾನಾಂತರವಾಗಿ 35 ಅಡಿ ಆಳದವರೆಗೆ ಬೇರೆ ಗುಂಡಿ ತೋಡಿ ಅಗೆದು ಮಗುವನ್ನು ರಕ್ಷಿಸುವ ಪ್ರಯತ್ನ ಮಾಡಲಾಗಿತ್ತು. ಮಗುವಿನ ಚಲನವಲನಗಳ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆಮ್ಲಜನಕವನ್ನು ಪೂರೈಸಲಾಗುತ್ತಿತ್ತು. ಆದರೆ ಮಂಗಳವಾರ ಸಂಜೆಯಿಂದ ಮಗುವಿನಿಂದ ಯಾವುದೇ ಪ್ರತಿಕ್ರಿಯೆ ಕಂಡುಬಂದಿರಲಿಲ್ಲ.
ಕೊಳವೆ ಬಾವಿಗೆ ಬಿದ್ದ ಮಗು ಸಾವು ಇದನ್ನು ಓದಿ:ಪತ್ನಿಗೆ ಸ್ನೇಹಿತರೊಂದಿಗೆ ಮಲಗಲು ಪೀಡಿಸಿದ: ಖಾಸಗಿ ದೃಶ್ಯ ಸೆರೆಹಿಡಿದು ಹೆಂಡತಿಗೇ ಬ್ಲಾಕ್ಮೇಲ್ ಮಾಡಿದ ಪತಿ
ಗಟ್ಟಿಯಾದ ಕಲ್ಲು ಮತ್ತು ನೀರು ಹೊರಬರುವುದರಿಂದ ಸುರಂಗ ಅಗೆಯುವ ಕಾರ್ಯ ನಿಧಾನವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ ರಕ್ಷಣಾ ಕಾರ್ಯಾಚರಣೆ ಜಾಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಇಂದರ್ ಸಿಂಗ್ ಪರ್ಮಾರ್ ಭೇಟಿ ನೀಡಿದ್ದರು. ಇದೇ ವೇಳೆ, ಮಗುವಿನ ಪೋಷಕರಿಗೆ ಧೈರ್ಯ ತುಂಬಿದ್ದರು.
ಮಗುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಕ್ಷಣಾ ತಂಡಗಳು ಅವಿರತವಾಗಿ ಕೆಲಸ ಮಾಡುತ್ತಿವೆ ಎಂದು ಪರ್ಮಾರ್ ತಿಳಿಸಿದ್ದರು. ಆದರೆ ಕಾರ್ಯಾಚರಣೆ ಯಶಸ್ವಿಯಾದರೂ ಮಗು ಬದುಕಿಸುವಲ್ಲಿ ವಿಫಲವಾಗಿದೆ. ಮಧ್ಯ ಪ್ರದೇಶದ ಬೆತುಲ್ ಜಿಲ್ಲೆಯ ಮಾಂಡವಿ ಗ್ರಾಮದಲ್ಲಿ ಡಿಸೆಂಬರ್ 6 ರಂದು 55 ಅಡಿ ಆಳದ ಬೋರ್‌ವೆಲ್‌ಗೆ 8 ವರ್ಷದ ತನ್ಮಯ್ ಸಾಹು ಬಿದ್ದಿದ್ದ.
ಇದನ್ನು ಓದಿ:ಶೂಟೌಟ್ನಲ್ಲಿ ಗೆದ್ದ ಅರ್ಜೆಂಟೀನಾ ಸೆಮೀಸ್ಗೆ.. ನೆದರ್ಲ್ಯಾಂಡ್ಸ್ ಕನಸು ಭಗ್ನ