ಕರ್ನಾಟಕ

karnataka

ETV Bharat / bharat

ಒಂದೇ ವರ್ಷದಲ್ಲಿ ಬಿಜೆಪಿ ಸೇರಿದ 27 ಶಾಸಕರು... ಮಧ್ಯಪ್ರದೇಶದಲ್ಲಿ ಪಕ್ಷಾಂತರ ಪರ್ವ

ಮಧ್ಯಪ್ರದೇಶದಲ್ಲಿ ಮತ್ತೋರ್ವ ಕಾಂಗ್ರೆಸ್​ ಶಾಸಕ ಇದೀಗ ಬಿಜೆಪಿ ಸೇರಿಕೊಂಡಿದ್ದು, ಈ ಮೂಲಕ ಕೈ ಪಡೆಗೆ ಮತ್ತಷ್ಟು ಹಿನ್ನೆಡೆಯಾಗಿದೆ.

MLA joins BJP
MLA joins BJP

By

Published : Oct 25, 2021, 5:32 AM IST

Updated : Oct 25, 2021, 5:47 AM IST

ಭೋಪಾಲ್​(ಮಧ್ಯಪ್ರದೇಶ):ಮಧ್ಯಪ್ರದೇಶದಲ್ಲಿ ಮತ್ತೋರ್ವ ಕಾಂಗ್ರೆಸ್ ಶಾಸಕ ಇದೀಗ ಭಾರತೀಯ ಜನತಾ ಪಾರ್ಟಿ ಸೇರಿದ್ದು, ಈ ಮೂಲಕ ಕಳೆದ ಒಂದು ವರ್ಷದಿಂದ ಇಲ್ಲಿಯವರೆಗೆ ಒಟ್ಟು 27 ಕೈ ಶಾಸಕರು ಕಮಲ ಮುಡಿದಂತೆ ಆಗಿದೆ.

ಬರ್ವಾಹಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಸಚಿನ್ ಬಿರ್ಲಾ ಇದೀಗ ಬಿಜೆಪಿ ಸೇರಿದ್ದಾರೆ. ಕಳೆದ ಮಾರ್ಚ್​ ತಿಂಗಳಲ್ಲಿ ಒಟ್ಟು 22 ಶಾಸಕರು ಕಾಂಗ್ರೆಸ್​ನಿಂದ ಬಿಜೆಪಿ ಸೇರಿದ್ದರಿಂದ ಅಲ್ಲಿನ ಕಮಲ್​ನಾಥ್​ ಸರ್ಕಾರ ಪತನಗೊಂಡಿತು. ಇದರ ಬೆನ್ನಲ್ಲೇ ಒಟ್ಟು ಐವರು ಶಾಸಕರು ಕಮಲ ಮುಡಿದಿದ್ದಾರೆ. ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್ ಸಮ್ಮುಖದಲ್ಲೇ ಸಚಿನ್​ ಬಿರ್ಲಾ ಬಿಜೆಪಿ ಸೇರಿದ್ದಾರೆ. ವಿಶೇಷವೆಂದರೆ ಖಾಂಡ್ವಾ-ಬುರ್ಹಾನ್​​ಪುರ್ ಲೋಕಸಭೆ ಕ್ಷೇತ್ರ ಹಾಗೂ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ.

ಇದನ್ನೂ ಓದಿರಿ:ರೋಹಿತ್​ ಅವರನ್ನ ಕೈಬಿಡುತ್ತೀರಾ? ಪಾಕ್​ ಪತ್ರಕರ್ತನ ಪ್ರಶ್ನೆಗೆ ಈ ರೀತಿ ತಿರುಗೇಟು ನೀಡಿದ ಕೊಹ್ಲಿ!

ಕಮಲ ಸೇರಿದ ಬಳಿಕ ಕಮಲ್​ನಾಥ್​ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿನ್​, ಅವರನ್ನ ಭೇಟಿಯಾಗಲು ಪ್ರಯತ್ನಿಸಿದಾಗಲೆಲ್ಲಾ ಸಮಯವಿಲ್ಲ ಎಂದು ಹೇಳಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ, ಒಪ್ಪಂದ ಮಾಡಿಕೊಳ್ಳುವ ಮೂಲಕ ಬಿಜೆಪಿ ಮತ್ತೊಮ್ಮೆ ಪ್ರಜಾಪ್ರಭುತ್ವದಕ್ಕೆ ಕಳಂಕ ತಂದಿದೆ ಎಂದಿದ್ದಾರೆ.

Last Updated : Oct 25, 2021, 5:47 AM IST

ABOUT THE AUTHOR

...view details