ಕರ್ನಾಟಕ

karnataka

ETV Bharat / bharat

Kaali poster row: ಲೀನಾ ವಿರುದ್ಧ ಲುಕೌಟ್ ನೋಟಿಸ್‌ ಹೊರಡಿಸುವಂತೆ ಗೃಹ ಸಚಿವರ ಆಗ್ರಹ - ಲೀನಾ ಮಣಿಮೇಕಲೈ ಇದೀಗ ಮತ್ತೊಂದು ವಿವಾದಾತ್ಮಕ ಪೋಸ್ಟರ್​ ಟ್ವೀಟ್

ಕಾಳಿ ಮಾತೆಗೆ ಅವಮಾನ ಮಾಡಿ ವಿವಾದ ಹುಟ್ಟುಹಾಕಿದ್ದ, ಲೀನಾ ಮಣಿಮೇಕಲೈ ಇದೀಗ ಮತ್ತೊಂದು ವಿವಾದಾತ್ಮಕ ಪೋಸ್ಟರ್​ ಟ್ವೀಟ್​​ ಮಾಡಿದ್ದಾರೆ. ಅವರ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡುವಂತೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಆಗ್ರಹಿಸಿದ್ದಾರೆ.

ಲೀನಾ ಮಣಿಮೇಕಲೈ ಇದೀಗ ಮತ್ತೊಂದು ವಿವಾದಾತ್ಮಕ ಪೋಸ್ಟರ್​ ಟ್ವೀಟ್
ಲೀನಾ ಮಣಿಮೇಕಲೈ ಇದೀಗ ಮತ್ತೊಂದು ವಿವಾದಾತ್ಮಕ ಪೋಸ್ಟರ್​ ಟ್ವೀಟ್

By

Published : Jul 7, 2022, 6:16 PM IST

ಭೋಪಾಲ್ (ಮಧ್ಯಪ್ರದೇಶ): ಚಿತ್ರ ನಿರ್ಮಾಪಕಿ, ನಟಿ ಲೀನಾ ಮಣಿಮೇಕಲೈ ಕಾಳಿ ಸಾಕ್ಷ್ಯಾಚಿತ್ರದ ವಿವಾದ ಬಳಿಕ ಮತ್ತೊಂದು ಪೋಸ್ಟ್ ಮಾಡಿ, ಕಾಳಿ ಪೋಸ್ಟರ್ ವಿರೋಧಿಸಿದ್ದವರನ್ನು ವ್ಯಂಗ್ಯ ಮಾಡಿದ್ದಾರೆ. ಆಕೆಯ ಹೊಸ ಟ್ವೀಟ್​ನಲ್ಲಿ ಶಿವ ಮತ್ತು ಪಾರ್ವತಿ ಸಿಗರೇಟ್ ಸೇದುತ್ತಿರುವುದನ್ನು ಕಾಣಬಹುದಾಗಿದೆ. ಈ ಬಗ್ಗೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಲುಕೌಟ್ ನೋಟಿಸ್ ಜಾರಿ ಮಾಡುವಂತೆ ಒತ್ತಾಯಿಸುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ. "ನಾನು ಈ ವಿಷಯದ ಬಗ್ಗೆ ಟ್ವಿಟರ್‌ಗೆ ಪತ್ರ ಬರೆಯಲಿದ್ದೇನೆ" ಎಂದು ರಾಜ್ಯ ಸರ್ಕಾರದ ವಕ್ತಾರರೂ ಆಗಿರುವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಮಣಿಮೇಕಲೈ ವಿರುದ್ಧ ಲುಕೌಟ್ ಸುತ್ತೋಲೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಗುರುವಾರ ಭೋಪಾಲ್‌ನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, 'ಕಾಳಿ' ಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈ ಅವರಂತಹ ವಿಕೃತ ಮನಸ್ಥಿತಿಯ ಜನರು ಮಾಡುವ ಪೋಸ್ಟ್ ಬಗ್ಗೆ ಟ್ವಿಟರ್ ಪರಿಶೀಲಿಸಬೇಕು. ಈ ಹಿಂದೆ ಕಾಳಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಮಹುವಾ ಮೊಯಿತ್ರಾ ವಿರುದ್ಧ ಸಂಸದ ಸಿ.ಎಂ.ಶಿವರಾಜ್ ಪ್ರಕರಣ ದಾಖಲಿಸಿದ್ದು, ಗೃಹ ಸಚಿವ ನರೋತ್ತಮ್ ಮಿಶ್ರಾ ನಿರ್ದೇಶನದ ಮೇರೆಗೆ ಕಲಿ ಚಿತ್ರದ ನಿರ್ಮಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ವಿವಾದಾತ್ಮಕ ಕಾಳಿ ಮಾತೆ ಪೋಸ್ಟರ್​... ನಿರ್ಮಾಪಕಿ ಲೀನಾ ವಿರುದ್ಧ ದೂರು ದಾಖಲು


ABOUT THE AUTHOR

...view details