ರೇವಾ (ಮಧ್ಯಪ್ರದೇಶ) :ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಭಾರೀ ಮಳೆಗೆ ಮನೆ ಕುಸಿದು ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವಿಗೀಡಾಗಿದ್ದು, ಇನ್ನೊಬ್ಬ ಬಾಲಕಿ ಗಾಯಗೊಂಡಿದ್ದಾಳೆ.
ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಘುಚಿಯಾರಿ ಬಹೇರಾ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಇಳಯರಾಜ ಟಿ ಮಾಹಿತಿ ನೀಡಿದ್ದಾರೆ.
ವರುಣನ ಆರ್ಭಟಕ್ಕೆ ಮನೆ ಕುಸಿತ: ಇಂದೇ ಕುಟುಂಬದ ನಾಲ್ವರ ಸಾವು ಮನೆ ಕುಸಿದ ಪರಿಣಾಮ 35 ವರ್ಷದ ವ್ಯಕ್ತಿ, ಅವರ 60 ವರ್ಷದ ತಾಯಿ ಮತ್ತು 7 ಮತ್ತು 8 ವರ್ಷದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಧಮ್ತಾರಿ ಜಿಲ್ಲೆಯಲ್ಲಿ ಯುವಕನನ್ನು ಹತ್ಯೆಗೈದ ನಕ್ಸಲರು
ಗ್ರಾಮವನ್ನು ಸಂಪರ್ಕಿಸುವ ಮಾರ್ಗ ಸರಿ ಇಲ್ಲದ ಕಾರಣ ಆಡಳಿತ ತಂಡವು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆ ಸಂಬಂಧ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಸಂತಾಪ ಸೂಚಿಸಿದ್ದಾರೆ.