ಕರ್ನಾಟಕ

karnataka

ETV Bharat / bharat

ಭೀಕರ ಅಪಘಾತ: ಸಬ್​​ಇನ್ಸ್​​​ಪೆಕ್ಟರ್​, ಇಬ್ಬರು ಕಾನ್​​ಸ್ಟೇಬಲ್​ ಸೇರಿ ನಾಲ್ವರ ದುರ್ಮರಣ - ಅಪಘಾತದಲ್ಲಿ ಪೊಲೀಸರ ದುರ್ಮರಣ

ಕಳ್ಳನ ಬೆನ್ನಟ್ಟಿ ಹೋಗುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಸಬ್​​ಇನ್ಸ್​​ಪೆಕ್ಟರ್​ ಹಾಗೂ ಇಬ್ಬರು ಕಾನ್ಸ್​​ಟೇಬಲ್​​​ ಸಾವಿಗೀಡಾಗಿದ್ದಾರೆ.

road accident
road accident

By

Published : Oct 6, 2021, 2:59 PM IST

ಮೊರೆನಾ(ಮಧ್ಯ ಪ್ರದೇಶ): ಭೀಕರ ರಸ್ತೆ ಅಪಘಾತವೊಂದರಲ್ಲಿ ಪೊಲೀಸ್​ ಸಬ್​ ಇನ್ಸ್​​ಪೆಕ್ಟರ್​​, ಇಬ್ಬರು ಕಾನ್ಸ್​​ಟೇಬಲ್​​ ಸೇರಿದಂತೆ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ. ಘಟನೆಯಲ್ಲಿ ಕಾರು ಚಲಾವಣೆ ಮಾಡ್ತಿದ್ದ ಡ್ರೈವರ್​ ಕೂಡ ಸಾವಿಗೀಡಾಗಿದ್ದಾನೆ.

ಬುಧವಾರ ನಸುಕಿನ ಜಾವ SUV ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಟ್ರಕ್​​ಗೆ ಡಿಕ್ಕಿ ಹೊಡೆದಿರುವ ಪರಿಣಾಮ ಈ ದುರ್ಘಟನೆ ನಡೆದಿದ್ದು, ಸಬ್​​ ಇನ್ಸ್​​​ಪೆಕ್ಟರ್​​ ಹಾಗೂ ಇಬ್ಬರು ಕಾನ್ಸ್​ಟೇಬಲ್​​ಗಳು ದುರ್ಮರಣಕ್ಕೀಡಾಗಿದ್ದಾರೆ.

ಅಲಿಗಢದ ಇಗ್ಲಾಸ್​​ನಿಂದ ತಲೆಮರೆಸಿಕೊಂಡಿದ್ದ ಕ್ರಿಮಿನಲ್​​ ಬಂಧನಕ್ಕೆ ತೆರಳಿದ್ದ ವೇಳೆ ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದ್ದು, ಅವರೆಲ್ಲರೂ ಸಾವಿಗೀಡಾಗಿದ್ದಾರೆಂದು ಗ್ರಾಮೀಣ ಪೊಲೀಸ್ ಠಾಣೆ ವರಿಷ್ಠಾಧಿಕಾರಿ ಶುಭಂ ಪಟೇಲ್​ ತಿಳಿಸಿದ್ದಾರೆ.

ಇದನ್ನೂ ಓದಿರಿ:ಗ್ಯಾಸ್ ಸಿಲಿಂಡರ್ ಸ್ಫೋಟ: 9 ಜನರಿಗೆ ಗಂಭೀರ ಗಾಯ

ಮೃತರನ್ನ ಉತ್ತರ ಪ್ರದೇಶದ ಪೊಲೀಸ್​ ಇಲಾಖೆಯ ಕೊಟ್ವಾಲಿಯ ಸಬ್​ ಇನ್ಸ್​​ಪೆಕ್ಟರ್​ ಮನೀಶ್ ಕುಮಾರ್​, ಕಾನ್ಸ್​ಟೇಬಲ್​​ ಪವನ್​ ಕುಮಾರ್​, ಸುನೀಲ್​ ಕುಮಾರ್​ ಹಾಗೂ ಕಾರು ಚಾಲಕ ದೀಪಕ್​​ ಸಿಂಗ್​ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಓರ್ವ ಪೊಲೀಸ್ ಪೇದೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಗ್ವಾಲಿಯರ್​​ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ABOUT THE AUTHOR

...view details