ನೆಲ್ಲೂರು(ಆಂಧ್ರಪ್ರದೇಶ):ಜನರ ಮೇಲೆ ಸಿನಿಮಾಗಳ ಪ್ರಭಾವ ತುಂಬಾ ಹೆಚ್ಚುತ್ತಿದೆ. ಸಿನಿಮಾದಲ್ಲಿ ಬಳಸಿದ ಕೆಲ ಐಡಿಯಾಗಳನ್ನು ಕೆಲವರು ನಿಜ ಜೀವನದಲ್ಲೂ ಅದನ್ನೇ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ತೋರಿಸಿದಂತೆ ನಾಯಕ ತಾನು ಸಿಬಿಐ ಅಧಿಕಾರಿ ಎಂದು ನಂಬಿಸಿ ಆಭರಣ ಅಂಗಡಿಯಲ್ಲಿದ್ದ ವಸ್ತುಗಳನ್ನೆಲ್ಲ ಕದಿಯುತ್ತಾನೆ. ಈ ಸಿನಿಮಾದಲ್ಲಿ ನಾಯಕ ಯಶಸ್ಸು ಸಹ ಕಾಣುತ್ತಾನೆ. ಆದರೆ, ಇಲ್ಲೊಂದು ಗ್ಯಾಂಗ್ ಇದೇ ರೀತಿ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.
ನೆಲ್ಲೂರು ಜಿಲ್ಲೆಯಲ್ಲಿ ಕಳ್ಳರ ತಂಡವೊಂದು ಬೆಂಗಳೂರು ಜಾರಿ ನಿರ್ದೇಶನಾಲಯ ಹೆಸರಲ್ಲಿ ಭಾರಿ ಕಳ್ಳತನಕ್ಕೆ ಯೋಜನೆ ರೂಪಿಸಿದೆ. ನೆಲ್ಲೂರು ಕಾಕರ್ಲಾವರಿ ಸ್ಟ್ರೀಟ್ನ ಲಾವಣ್ಯ ಜ್ಯುವೆಲರ್ಸ್ನಲ್ಲಿ ಯೋಜನೆ ಕಾರ್ಯಗತಗೊಳಿಸಲು ನಿರ್ಧರಿಸಿದರು. ತಪಾಸಣೆ ಹೆಸರಲ್ಲಿ ದಾಳಿ ನಡೆಸಿದ ಕಳ್ಳರು ಸುಮಾರು 12 ಕೆಜಿ ಚಿನ್ನ ಲೂಟಿ ಮಾಡಲು ಯೋಜಿಸಿದ್ದರು.