ಕರ್ನಾಟಕ

karnataka

ETV Bharat / bharat

ಹೆಂಡ್ತಿ ಕೊಂದ ಆರೋಪದ ಮೇಲೆ ಗಂಡನಿಗೆ ಜೈಲುಶಿಕ್ಷೆ.. ಪ್ರೇಮಿ​​ ಜೊತೆ ಪ್ರತ್ಯಕ್ಷವಾದ ಮಹಿಳೆ! - ಹೆಂಡ್ತಿ ಕೊಂದ ಆರೋಪದ ಮೇಲೆ ಗಂಡನಿಗೆ ಜೈಲು ಶಿಕ್ಷೆ

ಹೆಂಡತಿ ಕೊಲೆ ಮಾಡಿರುವ ಆರೋಪದ ಮೇಲೆ ಗಂಡನೋರ್ವ ಜೈಲಿನಲ್ಲಿ ಕಾಲ ಕಳೆಯುತ್ತಿದ್ದರೆ, ಇತ್ತ ಹೆಂಡತಿ ಲವರ್ ಜೊತೆ ಜಲಂದರ್​​ನಲ್ಲಿ ವಾಸವಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

WOMAN FOUND WITH LOVER IN JALANDHAR
WOMAN FOUND WITH LOVER IN JALANDHAR

By

Published : May 2, 2022, 9:14 PM IST

ಮೋತಿಹಾರ(ಬಿಹಾರ): ಬಿಹಾರದ ಪೂರ್ವ ಚಂಪಾರಣ್​​ ಜಿಲ್ಲೆಯಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದ್ದು, ಕಟ್ಟಿಕೊಂಡ ಹೆಂಡತಿ ಕೊಲೆ ಮಾಡಿರುವ ಆರೋಪದ ಮೇಲೆ ಗಂಡನಿಗೆ ಜೈಲು ಪಾಲಾಗಿದ್ದರೆ, ಸಾವನ್ನಪ್ಪಿದ್ದಾಳೆ ಎನ್ನಲಾದ ಮಹಿಳೆ ಲವರ್​ ಜೊತೆ ಪಂಜಾಬ್​ನ ಜಲಂಧರ್​ನಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಈ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಾಂತಿ ದೇವಿ 2016ರ ಜೂನ್ ತಿಂಗಳಲ್ಲಿ ಲಕ್ಷ್ಮೀಪುರದ ನಿವಾಸಿ ದಿನೇಶ್​ ರಾಮ್​ ಎಂಬಾತನೊಂದಿಗೆ ಮದುವೆ ಮಾಡಿಕೊಂಡಿದ್ದರು. ಮದುವೆಯಾದ ವರ್ಷದ ನಂತರ ಗಂಡನ ಮನೆಯಿಂದ ಓಡಿ ಹೋಗಿ ಪಂಜಾಬ್​ನಲ್ಲಿ ತನ್ನ ಲವರ್ ಜೊತೆ ಜೀವನ ನಡೆಸಲು ಶುರು ಮಾಡ್ತಾರೆ. ಆಕೆ ಮನೆಯಿಂದ ನಾಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರು ಪತಿಯೇ ವರದಕ್ಷಿಣೆಗೋಸ್ಕರ ಆಕೆಯನ್ನ ಕೊಂದು ಮೃತದೇಹವನ್ನ ಸುಟ್ಟು ಹಾಕಿದ್ದಾನೆಂಬ ಗಂಭೀರ ಆರೋಪ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತಿದ್ದಂತೆ ಪತಿಯನ್ನ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ:ಗುಜರಾತ್​​ನಲ್ಲಿ AAP ಕಾರ್ಯಕರ್ತರ ಮೇಲೆ ಬಿಜೆಪಿ ಹಲ್ಲೆ..ವಿಡಿಯೋ ಸಮೇತ ಟ್ವೀಟ್ ಮಾಡಿದ ಕೇಜ್ರಿವಾಲ್!

ಗಂಡನ ಬಂಧನವಾಗ್ತಿದ್ದಂತೆ ಸುಮ್ಮನೆ ಕುಳಿತುಕೊಳ್ಳದ ಪೊಲೀಸರು ಶಾಂತಿ ದೇವಿ ಬಳಕೆ ಮಾಡ್ತಿದ್ದ ಮೊಬೈಲ್ ಫೋನ್​ ನಂಬರ್​ ಸ್ಥಳವನ್ನ ಪತ್ತೆ ಹಚ್ಚಿದ್ದಾರೆ. ಈ ವೇಳೆ ಅದು ಜಲಂಧರ್​​ನಲ್ಲಿರುವುದನ್ನ ತೋರಿಸುತ್ತಿದ್ದಂತೆ ಅಲ್ಲಿಗೆ ತೆರಳಿದ್ದಾರೆ. ಈ ವೇಳೆ, ಲವರ್​ ಜೊತೆ ಸಿಕ್ಕಿಬಿದ್ದಿದ್ದಾಳೆ. ಇದೀಗ ಆಕೆಯನ್ನ ಮೋತಿಹಾರಿಗೆ ಕರೆತಂದಿರುವ ಪೊಲೀಸರು, ಸುಳ್ಳು ಆರೋಪ ಮಾಡಿರುವ ಮಹಿಳೆಯ ಕುಟುಂಬದ ಸದಸ್ಯರನ್ನು ಬಂಧನ ಮಾಡಿದ್ದಾರೆ. ನಿರಪರಾಧಿ ಗಂಡ ದಿನೇಶ್​​ನನ್ನ ಬಿಡುಗಡೆ ಮಾಡಿದ್ದಾರೆ.

ABOUT THE AUTHOR

...view details