ಹೈದರಾಬಾದ್ :ಈಜಲೆಂದು ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವಾಗ ತಾಯಿ ತನ್ನ ಕರುಳ ಕುಡಿ ಕಾಪಾಡಲು ಹರಸಾಹಸ ಪಡುತ್ತಿರುವ ದೃಶ್ಯ ಮನಕಲುಕುವಂತಿದೆ. ಇದು ಹೈದರಾಬಾದ್ನ ಮೂಸಾಪೇಟೆ ಎಂಬಲ್ಲಿ ನಡೆದ ಘಟನೆ.
ಭವಾನಿ ಮತ್ತು ವೆಂಕಟರಾವ್ ದಂಪತಿ ಮಗ ನವೀನ್(8) ಮೃತ ಬಾಲಕ. ಈ ದಂಪತಿ ಕಳೆದ 15 ವರ್ಷದ ಹಿಂದೆ ಉದ್ಯೋಗಕ್ಕಾಗಿ ಹೈದರಾಬಾದ್ಗೆ ಆಗಮಿಸಿದ್ದತ್ತು. ಗುತ್ತಿಗೆಗಾರರಾಗಿ ಕೆಲಸ ಮಾಡುತ್ತಿದ್ದ ವೆಂಕಟರಾವ್ ದಂಪತಿಗೆ ಇಬ್ಬರು ಗಂಡು ಮಕ್ಕಳು.
ನವೀನ್ ಸಣ್ಣ ಕೊಳವೊಂದರಲ್ಲಿ ಈಜಾಡುತ್ತಿದ್ದಾಗ ಕೊಳದಲ್ಲಿದ್ದ ದೊಡ್ಡ ರಂಧ್ರದೊಳಗೆ ಬಿದ್ದಿದ್ದಾನೆ. ಮೇಲೆ ಬರಲಾಗದೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ ಆತನ ಜೊತೆಗಿದ್ದ ಬೇರೆ ಮಕ್ಕಳು ತಾಯಿ ಭವಾನಿಗೆ ಮಾಹಿತಿ ನೀಡಿದ್ದಾರೆ.