ಚಿತ್ತೋರಗಢ(ರಾಜಸ್ಥಾನ):ತಂದೆಯೋರ್ವ ಹೆತ್ತ ಮಗನ ಮೇಲೆ ಅತ್ಯಂತ ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿರುವ ಘಟನೆ ರಾಜಸ್ಥಾನದ ಚಿತ್ತೋರಗಢದಲ್ಲಿ ನಡೆದಿದೆ. ಘಟನೆಯ ವಿಡಿಯೋ ತಾಯಿಯ ಮೊಬೈಲ್ನಲ್ಲೇ ಸೆರೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ನೀಡಿದ್ದಾರೆ.
ಶಾಲೆಗೆ ತೆರಳಿದ್ದ ಬಾಲಕನೋರ್ವ ಹೋಮ್ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕಾಗಿ ತಂದೆ ಆತನ ಕೈ-ಕಾಲು ಕಟ್ಟಿಹಾಕಿ, ತಲೆ ಕೆಳಗೆ ಮಾಡಿ ನೇತು ಹಾಕಿದ್ದಾನೆ. ಇದಾದ ಮೇಲೆ, ಅಮಾನವೀಯ ರೀತಿಯಲ್ಲಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ಇದರ ವಿಡಿಯೋವನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿರುವ ತಾಯಿ, ಚಿತ್ತೋರಗಢದ ಬೇಗೊದಲ್ಲಿರುವ ತನ್ನ ಸಹೋದರನ ಮೊಬೈಲ್ಗೆ ಕಳುಹಿಸಿಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.