ಹೈದರಾಬಾದ್:ತಾಯಿಯೊಬ್ಬಳು ತನ್ನ ವಿವಾಹೇತರ ಸಂಬಂಧಕ್ಕೆ ಮಗ ಅಡ್ಡಿಯಾಗುತ್ತಿದ್ದಾನೆ ಎಂದು ತಿಳಿದು ತಾನು ಹೆತ್ತು ಸಾಕಿದ ಕಂದನನ್ನು ಅಮಾನುಷವಾಗಿ ಕೊಲೆಗೈದ ಘಟನೆ ಜೀಡಿಮೆಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉದಯ ಮತ್ತು ಸುರೇಶ್ಗೆ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದು ಜಗದ್ಗಿರಿಗುಟ್ಟದಲ್ಲಿ ವಾಸಿಸುತ್ತಿದ್ದಾರೆ. ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಉದಯಗೆ ಭಾಸ್ಕರ್ ಎಂಬ ವ್ಯಕ್ತಿ ಪರಿಚಯವಾಗಿದ್ದಾನೆ. ಭಾಸ್ಕರ್ ಜೊತೆ ಉದಯ ಬಹಳ ಸಲುಗೆಯಿಂದ ಇರುವುದನ್ನು ಕಂಡ ಸುರೇಶ್ ತನ್ನ ಪತ್ನಿಗೆ ಎಚ್ಚರಿಸಿದ್ದಾನೆ. ಹೀಗಾಗಿ ಇಬ್ಬರ ಮಧ್ಯೆ ಆಗಾಗ ಮನಸ್ತಾಪಗಳು ನಡೆಯುತ್ತಿದ್ದರಿಂದ ಮೂರು ವರ್ಷಗಳ ಹಿಂದೆ ಬೇರೆ-ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಉಮೇಶ್ಗೆ ತಾಯಿ ಉದಯ ಜನ್ಮ ನೀಡಿದ್ದಾಳೆ.
ಗಂಡನೊಂದಿಗೆ ಬೇರೆಯಾದ ಬಳಿಕ ಭಗತ್ಸಿಂಗ್ ನಗರದಲ್ಲಿ ಮೂರು ವರ್ಷದ ಮಗ ಉಮೇಶ್ ಜೊತೆ ಉದಯ ವಾಸಿಸುತ್ತಿದ್ದಳು. ಊಟ ಮಾಡುತ್ತಿಲ್ಲವೆಂದು ಹೇಳಿ ಪ್ರೇಮಿ ಭಾಸ್ಕರ್ ಜೊತೆ ಸೇರಿ ಉಮೇಶ್ಗೆ ವೈರ್ನಿಂದ ಥಳಿಸಿದ್ದಾಳೆ. ವೈರ್ನ ಏಟು ತಾಳದೇ ಉಮೇಶ್ ಮೂರ್ಛೆ ಹೋಗಿದ್ದಾನೆ. ತನ್ನ ಮೇಲೆ ಅನುಮಾನ ಬರಬಾರದೆಂದು ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಚಿಕಿತ್ಸೆ ಫಲಿಸದೇ ಬಾಲಕ ಮಂಗಳವಾರ ಸಂಜೆ ಮೃತಪಟ್ಟ.
ಈ ವಿಷಯ ತಿಳಿದು ಇನ್ಸ್ಪೆಕ್ಟರ್ ಬಾಲರಾಜು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮಗುವಿನ ತಾಯಿಯನ್ನು ವಿಚಾರಿಸಿದಾಗ ಊಟ ಮಾಡುತ್ತಿಲ್ಲವೆಂದು ಮಾಮೂಲಾಗಿ ಹೊಡೆದಿದ್ದಕ್ಕೆ ಹೀಗಾಗಿದೆ ಎಂದು ಹೇಳಿದ್ದಾಳೆ. ಬಳಿಕ ಭಾಸ್ಕರ್ ಮತ್ತು ಉದಯನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಮಗುವಿಗೆ ಕೋಣೆಯೊಂದರಲ್ಲಿ ವೈರ್ನಿಂದ ಥಳಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.