ಕರ್ನಾಟಕ

karnataka

ETV Bharat / bharat

ಆರ್ಥಿಕ ಸಂಕಷ್ಟ ತಾಳಲಾರದೆ ತಾಯಿಯ ಪರದಾಟ: ಪುಟ್ಟ ಮಗು ಕೊಂದು ಆತ್ಮಹತ್ಯೆಗೆ ಯತ್ನ - ಮೊರಾದಾಬಾದ್​ನಲ್ಲಿ ಮಕ್ಕಳ ಮೇಲೆ ಹಲ್ಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಘೋಸಿಪುರ ಪ್ರದೇಶದ ನಿವಾಸಿಯಾದ ದೇವೇಂದ್ರ ಎಂಬುವವರ ಕುಟುಂಬವು ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಿತ್ತು. ಆದರೆ ಮನೆಯಲ್ಲಿ ಆರ್ಥಿಕ ತೊಂದರೆಯಿತ್ತು. ಇದೇ ಕಾರಣಕ್ಕೆ ದೇವೇಂದ್ರ ಮತ್ತು ಪತ್ನಿ ಪ್ರೀತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ಮನನೊಂದ ತಾಯಿ ತನ್ನಿಬ್ಬರು ಮಕ್ಕಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೊರದಾಬಾದ್‌ನ ಕಟ್ಘರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೌಟುಂಬಿಕ ಕಲಹಕ್ಕೆ 4 ವರ್ಷದ ಮಗು ಬಲಿ
ಕೌಟುಂಬಿಕ ಕಲಹಕ್ಕೆ 4 ವರ್ಷದ ಮಗು ಬಲಿ

By

Published : Aug 8, 2021, 4:52 PM IST

ಮೊರಾದಾಬಾದ್: ಜಿಲ್ಲೆಯ ಕಟ್ಘರ್ ಪೊಲೀಸ್ ಠಾಣಾ ವ್ಯಾಪ್ತಿಯ ಘೋಸಿಪುರ ಗ್ರಾಮದಲ್ಲಿ ಆರ್ಥಿಕ ತೊಂದರೆಯಿಂದಾಗಿ ಮನನೊಂದ ತಾಯಿ ತನ್ನ ಇಬ್ಬರು ಪುತ್ರರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಘಟನೆಯಲ್ಲಿ ಓರ್ವ ಪುತ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವೇಳೆ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಜನರು ಗಾಯಗೊಂಡ ಸ್ಥಿತಿಯಲ್ಲಿದ್ದ ತಾಯಿ ಮತ್ತು ಇನ್ನೋರ್ವ ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ.

ಘೋಸಿಪುರ ಪ್ರದೇಶದ ನಿವಾಸಿಯಾದ ದೇವೇಂದ್ರ ಎಂಬುವವರ ಕುಟುಂಬವು ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಿತ್ತು. ಆದರೆ ಮನೆಯಲ್ಲಿ ಆರ್ಥಿಕ ತೊಂದರೆಯಿತ್ತು. ಇದೇ ಕಾರಣಕ್ಕೆ ದೇವೇಂದ್ರ ಮತ್ತು ಪತ್ನಿ ಪ್ರೀತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಶನಿವಾರ, ದೇವೇಂದ್ರ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರು.

ಈ ಸಮಯದಲ್ಲಿ, ಪತ್ನಿ ಪ್ರೀತಿ ತನ್ನ ಇಬ್ಬರು ಮಕ್ಕಳನ್ನು ಕೋಣೆಯಲ್ಲಿ ಕರೆದುಕೊಂಡು ಹೋಗಿ, ಬೀಗ ಹಾಕಿದ್ದಾಳೆ. ಬಳಿಕ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ಇದರಲ್ಲಿ 4 ವರ್ಷದ ಮಗ ಲಕ್ಷ್ಯ ಮೃತಪಟ್ಟಿದ್ದಾನೆ. ಅದೇ ಸಮಯದಲ್ಲಿ, 7 ವರ್ಷದ ಎರಡನೇ ಮಗನಾದ ದಕ್ಷ್ಯನ ಸ್ಥಿತಿ ಗಂಭೀರವಾಗಿದೆ. ಇಬ್ಬರೂ ಮಕ್ಕಳ ಮೇಲೆ ಹಲ್ಲೆ ಮಾಡಿದ ನಂತರ, ತಾಯಿ ಸ್ವತಃ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಸ್ಥಳಕ್ಕಾಗಮಿಸಿದ ನೆರೆಹೊರೆಯವರು ಗಾಯಗೊಂಡ ತಾಯಿ ಮತ್ತು ಮಗ ದಕ್ಷ್ಯನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಕುರಿತು ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಎಸ್ಪಿ ಅಮಿತ್ ಕುಮಾರ್ ಆನಂದ್ ಮಾತನಾಡಿ, ಮಹಿಳೆ ತನ್ನ 4 ವರ್ಷದ ಮಗನನ್ನು ಕೊಂದಿದ್ದಾಳೆ. ಇನ್ನೊಂದು 7 ವರ್ಷದ ಮಗನ ಮೇಲೆ ಹಲ್ಲೆ ಮಾಡಿದ್ದಾಳೆ. ಆರ್ಥಿಕ ತೊಂದರೆ ಮತ್ತು ಕೌಟುಂಬಿಕ ವಿವಾದದಿಂದಾಗಿ ಮಹಿಳೆ ಈ ಕೃತ್ಯ ಎಸಗಿದ್ದಾರೆ ಎಂದು ತೋರುತ್ತದೆ. ಪ್ರಸ್ತುತ, ಈ ಕುರಿತು ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ರಕ್ಷಾಬಂಧನದಂದು ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸಲಿರುವ ಯೋಗಿ ಸರ್ಕಾರ

ABOUT THE AUTHOR

...view details