ಔರಂಗಾಬಾದ್(ಬಿಹಾರ): ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಹೆಚ್ಚು ಎಂಬ ಮಾತಿದೆ. ಆದ್ರೆ ಈ ಮಾತಿಗೆ ಅಪವಾದ ಎಂಬಂತಹ ಪ್ರಕರಣವೊಂದು ಔರಂಗಾಬಾದ್ ಜಿಲ್ಲೆಯ ಮದನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಾ ಬಿಘಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹೌದು, ಈ ಹೃದಯವಿದ್ರಾವಕ ಮತ್ತು ಅಮಾನವೀಯ ಪ್ರಕರಣದ ಡಿಟೇಲ್ಸ್ಗೆ ಬರೋದಾದ್ರೆ.. ಮಹಿಳೆಯೊಬ್ಬರು ತಮ್ಮ ಮಗನನ್ನೇ ಕೊಂದು ಶವವನ್ನು ಅಂಗಳದಲ್ಲಿ ಹೂತು ಹಾಕಿದ್ದಾಳೆ. ಕಳೆದ ಎರಡು ತಿಂಗಳ ಹಿಂದೆ ಆರೋಪಿಯ ಮಗಳು ಸಹ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಶಿವಗಂಜ್ ನಿವಾಸಿ ದಿವಂಗತ ವಿನಯ್ ಕುಮಾರ್ ಸಿಂಗ್ ಅವರ ಮಗ ಮಾರುತಿ ನಂದನ್ ಕುಮಾರ್ (15) ಮೃತ ಬಾಲಕ. ಕಾಂಚನ ದೇವಿ ಮಗನನ್ನೇ ಕೊಂದಿರುವ ಆರೋಪಿ. ಕಳೆದ ಭಾನುವಾರ ತಮ್ಮ ಮಗ ಮಾರುತಿ ನಂದನ್ ಕುಮಾರ್ ಮನೆಯಿಂದ ನಾಪತ್ತೆಯಾಗಿದ್ದಾನೆ. ಶನಿವಾರ ಶಾಲಾ ಶುಲ್ಕ ಕಟ್ಟುವಂತೆ 750 ರೂಪಾಯಿ ನೀಡಿದ್ದರೂ ಶಾಲೆಯಲ್ಲಿ ಶುಲ್ಕ ಕಟ್ಟದೇ ಮನೆಯಲ್ಲಿದ್ದ 1,500 ರೂಪಾಯಿ ತೆಗೆದುಕೊಂಡು ಹೋಗಿದ್ದಾನೆ. ಸಾಕಷ್ಟು ಹುಡುಕಿದರೂ ಸಿಗಲಿಲ್ಲ ಎಂದು ಪೊಲೀಸರಿಗೆ ಬಾಲಕನ ತಾಯಿ ತಿಳಿಸಿದ್ದಾಳೆ.
ಮನೆ ಅಂಗಳದಲ್ಲಿ ಮಗನ ಶವ ಹೂತಿಟ್ಟ ತಾಯಿ ಆದ್ರೆ, ಬಾಲಕ ಎರಡು ತಿಂಗಳ ಹಿಂದಿನಿಂದಲೇ ನಾಪತ್ತೆಯಾಗಿದ್ದಾನೆ ಎಂದು ಶನಿವಾರ ಗ್ರಾಮಸ್ಥರು ಮದನಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹಿಳೆ ಸತ್ಯ ಬಾಯ್ಬಿಟ್ಟಿದ್ದು, ತನ್ನ ಮಗನನ್ನು ಎರಡು ತಿಂಗಳ ಹಿಂದೆಯೇ ಕೊಂದು ಮನೆಯ ಅಂಗಳದಲ್ಲಿ ಹೂತಿಟ್ಟಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ:ದಬ್ಬಾಳಿಕೆಗೆ ಬೇಸತ್ತು ಕೊಲೆ.. ವ್ಯಕ್ತಿ ಹತ್ಯೆಗೈದು ಶವ ರಾಜಕಾಲುವೆಗೆ ಎಸೆದ ಐವರ ಬಂಧನ
ಮಹಿಳೆಯ ಪತಿ ನಿಧನ: 2018 ರಲ್ಲಿ ರಾಜೇಂದ್ರ ಸಿಂಗ್ ಅವರ ಮಗ ವಿನಯ್ ಕುಮಾರ್ ಸಾವನ್ನಪ್ಪಿದ್ದರು. ವಿನಯ್ ಸಾವಿನ ನಂತರ ಅವರ ಪತ್ನಿ ಕಾಂಚನ ದೇವಿ ಕೂಡ ಗುಪ್ತ ಕಾಯಿಲೆಯೊಂದರಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಮಹಿಳೆ ಉದ್ವಿಗ್ನಳಾಗಿದ್ದಳು. ಈ ಉದ್ವಿಗ್ನತೆಯಿಂದ ಮಗನನ್ನು ಕೊಂದಿದ್ದಾಳೆ. ಅಷ್ಟೇ ಅಲ್ಲದೇ, ಎರಡು ತಿಂಗಳ ಹಿಂದೆ ಮಹಿಳೆಯ ಪುತ್ರಿ ಪುನಿತಾ ಕುಮಾರಿ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು ಎಂದು ತಿಳಿದುಬಂದಿದೆ.