ಲೂಧಿಯಾನ, ಪಂಜಾಬ್:ತಾಯಿಯೊಬ್ಬಳ ತನ್ನ ನಾಲ್ಕು ವರ್ಷದ ಮಗುವನ್ನು ಕೊಂದು ಕೆರೆಗೆ ಎಸೆದಿರುವ ಘಟನೆ ಜಿಲ್ಲೆಯ ಹಸನ್ಪುರ ಗ್ರಾಮದಲ್ಲಿ ಕಂಡು ಬಂದಿದೆ. ಈ ಹಿಂದೆಯೂ ಈಕೆ ಮಕ್ಕಳ ದೇಹಗಳು ಇದೇ ರೀತಿ ಪತ್ತೆಯಾಗಿದ್ದವು ಎಂಬ ಮಾಹಿತಿ ಇದೆ.
ಏನಿದು ಘಟನೆ?:ಗ್ರಾಮದಲ್ಲಿ ಸೈಕಲ್ ರಿಪೇರಿ ಅಂಗಡಿ ನಡೆಸುತ್ತಿರುವ ವಲಸೆ ಕಾರ್ಮಿಕ ಶಾಮ್ ಲಾಲ್ ಅವರ ನಾಲ್ಕು ವರ್ಷದ ಮಗ ಕಾಳು ನಿನ್ನೆಯಿಂದ ನಾಪತ್ತೆಯಾಗಿದ್ದ. ಸಂಜೆ ತನಕ ಎಷ್ಟೇ ಹುಡುಕಿದರೂ ಕಾಳು ಸುಳಿವು ಸಿಕ್ಕಿರಲಿಲ್ಲ.
ಈ ಸುದ್ದಿ ಪಕ್ಕದ ಗ್ರಾಮದ ಭಾನೋಹರ್ ಗ್ರಾಮಕ್ಕೂ ತಲುಪಿದ್ದು, ಅಲ್ಲಿ ಸಹ ಕಾಳುಗಾಗಿ ಶೋಧ ನಡೆಸಲಾಗಿತ್ತು. ಆದರೂ ಸಹ ಕಾಳುವಿನ ಪತ್ತೆಯಾಗಲಿಲ್ಲ. ಬಳಿಕ ಎರಡು ಗ್ರಾಮಗಳಲ್ಲಿ ಅಳವಡಿಸಿದ ಕೆಲ ಸಿಸಿಟವಿ ಪರಿಶೀಲನೆ ನಡೆಸಿದಾಗ ಕಾಳುವನ್ನು ಅವರ ತಾಯಿ ಬಬಿತಾ ಜೊತೆ ಹೋಗುತ್ತಿರುವುದು ಕಂಡು ಬಂದಿದೆ.
ಓದಿ:ಒಂಟಿ ಮಹಿಳೆ ಕತ್ತು ಕೊಯ್ದು ಕೊಲೆ: ಚಿನ್ನಾಭರಣ, ನಗದು ದೋಚಿ ಹಂತಕರು ಪರಾರಿ
ಕೂಡಲೇ ಗ್ರಾಮಸ್ಥರು ಮಹಿಳೆಯನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಮಾಹಿತಿ ತಿಳಿದ ಪೊಲೀಸರು ಕೊಲೆಯಾದ ಮಗುವಿನ ತಾಯಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಆಗ ನಾನ್ನು ನನ್ನ ಮಗನನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿದೆ. ಬಳಿಕ ಆ ಗೋಣಿ ಚೀಲವನ್ನು ಕೆರೆಗೆ ಎಸೆದಿದ್ದೇನೆ ಎಂದು ಹೇಳಿದ್ದಾಳೆ. ಕೂಡಲೇ ಪೊಲೀಸರು ಕೆರೆ ಬಳಿ ನೋಡಿದಾಗ ಗೋಣಿಚೀಲವೊಂದು ನೀರಿನ ಮೇಲೆ ತೇಲುತ್ತಿರುವುದು ಕಂಡುಬಂದಿದೆ. ಚೀಲವನ್ನು ನೀರಿನಿಂದ ಹೊರ ತೆಗೆದು ಪರಿಶೀಲನೆ ನಡೆಸಿದಾಗ ಅದರಲ್ಲಿ ಕಾಳು ಮೃತ ದೇಹ ಕಂಡುಬಂದಿದೆ.
ಈಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆಗಾಗ ಅತೀಯಾಗಿ ಕೋಪ ಮಾಡಿಕೊಳ್ಳುತ್ತಿರುತ್ತಾರೆ. ಈ ಹಿಂದೆಯೂ ಇವರ ಮಕ್ಕಳ ಮೃತ ದೇಹಗಳು ಇದೇ ರೀತಿ ಪತ್ತೆಯಾಗಿದ್ದವು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆರೋಪಿ ಮಹಿಳೆಯನ್ನು ಬಂಧಿಸಿರುವ ಪೊಲೀಸರು ಸಂಪೂರ್ಣ ತನಿಖೆ ಕೈಗೊಳ್ಳುವುದಾಗಿ ಹೇಳಿದ್ದಾರೆ.