ಕರ್ನಾಟಕ

karnataka

ETV Bharat / bharat

ಕಾಲು ಕಳೆದುಕೊಂಡ ಮಗನನ್ನು ಪೊಲೀಸ್​ ಠಾಣೆ ಸುತ್ತಿಸಿ ನ್ಯಾಯ ಕೇಳಿದ ತಾಯಿ! Video - ಮೀರತ್

ಸ್ಟಂಟ್‌ಮ್ಯಾನ್ ಒಬ್ಬ ಮುಗ್ಧ ಬಾಲಕನ ಕಾಲು ತುಂಡಾಗುವುದಕ್ಕೆ ಕಾರಣವಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಬಾಲಕನನ್ನು ಆತನ ತಾಯಿ ತಳ್ಳುಬಂಡಿಯಲ್ಲಿ ಪೊಲೀಸ್​ ಠಾಣೆ ಬಳಿ ಕರೆತಂದು ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾಳೆ.

ಕಾಲು ಕಳೆದುಕೊಂಡ ಮಗನನ್ನು ಪೊಲೀಸ್​ ಠಾಣೆ ಸುತ್ತಿಸಿ ನ್ಯಾಯ ಕೇಳಿದ ತಾಯಿ!
ಕಾಲು ಕಳೆದುಕೊಂಡ ಮಗನನ್ನು ಪೊಲೀಸ್​ ಠಾಣೆ ಸುತ್ತಿಸಿ ನ್ಯಾಯ ಕೇಳಿದ ತಾಯಿ!

By

Published : Jun 24, 2021, 7:11 PM IST

ಉತ್ತರಪ್ರದೇಶ:ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಅಪಘಾತದಲ್ಲಿ ನನ್ನ ಮುಗ್ಧ ಮಗನ ಕಾಲು ಮುರಿದಿದೆ. ಆರೋಪಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಮಹಿಳೆ ಹ್ಯಾಂಡ್‌ಕಾರ್ಟ್‌ನಲ್ಲಿ ತನ್ನ ಮಗನನ್ನು ಪೊಲೀಸ್ ಠಾಣೆ ಸುತ್ತಲೂ ಸುತ್ತಿಸಿರುವ ಘಟನೆ ನಡೆದಿದೆ.

ಕಾಲು ಕಳೆದುಕೊಂಡ ಮಗನನ್ನು ಪೊಲೀಸ್​ ಠಾಣೆ ಸುತ್ತಿಸಿ ನ್ಯಾಯ ಕೇಳಿದ ತಾಯಿ!

ವಾರದ ಹಿಂದೆ ಸ್ಟಂಟ್ ಮ್ಯಾನ್ ಅಪಘಾತ ಮಾಡಿ ನನ್ನ ಮಗನ ಕಾಲು ಮುರಿದಿದ್ದಾನೆ. ಮಗನ ಚಿಕಿತ್ಸೆಗಾಗಿ ಯಾರು ಸಹಾಯ ಮಾಡುತ್ತಿಲ್ಲ. ಮಗನ ಸ್ಥಿತಿಗೆ ಕಾರಣರಾದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಾಯಿ ಆರೋಪಿಸಿದ್ದಾಳೆ.

ಘಟನೆಯಿಂದ ಅಸಹಾಯಕಳಾಗಿರುವ ತಾಯಿ ಗಾಯಗೊಂಡ ಮಗನನ್ನು ಹ್ಯಾಂಡ್‌ಕಾರ್ಟ್‌ನಲ್ಲಿ ಕರೆದುಕೊಂಡು ಹೋಗಿ ಪೊಲೀಸ್ ಠಾಣೆ ಸುತ್ತು ಹೊಡೆದಿದ್ದಾಳೆ.

ಸದ್ಯ ಘಟನೆಯ ವಿಡಿಯೋ ವೈರಲ್ ಆದ ತಕ್ಷಣ ಮೇಲಧಿಕಾರಿಗಳು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸದ್ಯ ಆರೋಪಿ ಶಾದಾಬ್ ಕುಟುಂಬದೊಂದಿಗೆ ಪರಾರಿಯಾಗಿದ್ದು,ಪೊಲೀಸರು ಈತನಿಗಾಗಿ ಬಲೆ ಬೀಸಿದ್ದಾರೆ.

ಓದಿ:ವರದಕ್ಷಿಣೆ ರೂಪದಲ್ಲಿ ಕಂತೆ ಕಂತೆ ನೋಟು, ಚಿನ್ನ - ಬೆಳ್ಳಿ, ದುಬಾರಿ ಕಾರು..Viral Video

ABOUT THE AUTHOR

...view details