ಕರ್ನಾಟಕ

karnataka

ETV Bharat / bharat

ಸೊಸೆಗೆ ಮಗಳ ಸ್ಥಾನ ನೀಡಿದ ಅತ್ತೆ.. ಮಗ ಮರೆಯಾಗಿದ್ದಕ್ಕೆ ಎರಡನೇ ಮದುವೆ ಮಾಡಿಸಿದ ಹೃದಯವಂತೆ!

ಸೊಸೆಯು ವಿಧವೆಯಾದ ನಂತರ ಅತ್ತೆಯಂದಿರು ಕಿರುಕುಳ ನೀಡುವ ಪ್ರಕರಣಗಳೇ ಹೆಚ್ಚಾಗಿ ವರದಿಯಾಗುತ್ತವೆ. ಆದ್ರೆ ಈ ಮಾತಿಗೆ ಅಪವಾದ ಎಂಬಂತೆ ಅತ್ತೆಯೊಬ್ಬರು ವಿಧವೆಯಾದ ಸೊಸೆಯ ಮದುವೆಯನ್ನು ತಾವೇ ಮುಂದೆ ನಿಂತು ಮಾಡಿಸುವ ಮೂಲಕ ಆದರ್ಶ ಮೆರೆದಿದ್ದಾರೆ.

widow daughter in law married in Shiva temple in Dhamtari  married in Shiva temple in Dhamtari  Mother in law got widow daughter in law married in Dhamtari  Mother in law performed duty of mother in Dhamtari  ಛತ್ತೀಸ್​ಗಢದಲ್ಲಿ ಸೊಸೆಗೆ ಮರು ಮದುವೆ ಮಾಡಿಸಿದ ಅತ್ತೆ  ಛತ್ತೀಸ್​ಗಢದಲ್ಲಿ ಸೊಸೆಗೆ ಮರು ಮದುವೆ  ಛತ್ತೀಸ್​ಗಢದಲ್ಲಿ ವಿಶೇಷ ಮದುವೆ ಸುದ್ದಿ
ಸೊಸೆಗೆ ಮರು ಮದುವೆ ಮಾಡಿಸಿದ ಅತ್ತೆ

By

Published : Jul 4, 2022, 2:07 PM IST

ಧಮತಾರಿ(ಛತ್ತೀಸ್​ಗಢ): ದಿನಗಳು ಕಳೆದಂತೆ ಸಮಾಜ ಬದಲಾಗುತ್ತಿದೆ. ಚಿಕ್ಕ ವಯಸ್ಸಿನ ವಿಧವೆಯರು ಸಹ ತಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಅದರಂತೆಯೇ ಅವರ ಅತ್ತೆ-ಮಾವಂದಿರು ಮತ್ತು ಪೋಷಕರು ಸಹ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಅತ್ತೆಯೊಬ್ಬರು ಮಗ ನಿಧನನಾದ ಬಳಿಕ ತನ್ನ ಸೊಸೆಯನ್ನು ಬೇರೆ ವ್ಯಕ್ತಿಯ ಜೊತೆಗೆ ಎರಡನೇ ಮದುವೆ ಮಾಡಿಕೊಟ್ಟಿರುವ ವಿಶೇಷ ಘಟನೆ ಬೆಳಕಿಗೆ ಬಂದಿದೆ.

ಕೃತಿ ಲತಾ ಮದುವೆ

32 ವರ್ಷದ ಕೃತಿಲತಾ ಸಿನ್ಹಾ ಮತ್ತು 40 ವರ್ಷದ ದುರ್ಗೇಶ್ ಸಿನ್ಹಾ ಅವರು ಧಮ್ತಾರಿಯ ರಿಸೈ ಪಾರಾದ ನಾಗೇಶ್ವರ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಕೃತಿ ಅವರ ಪತಿ ಗಜೇಂದ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಕೃತಿ ತಮ್ಮ 5 ವರ್ಷದ ಮಗುವಿನೊಂದಿಗೆ ಒಂಟಿಯಾಗಿ ವಾಸಿಸುತ್ತಿದ್ದರು. ಎರಡೂವರೆ ವರ್ಷಗಳ ಹಿಂದೆ ಭಿಲಾಯಿ ನಿವಾಸಿ ದುರ್ಗೇಶ್ ಅವರ ಪತ್ನಿ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದರು.

ಕೃತಿ ಲತಾ ಅತ್ತೆ ಯಮುನಾ ದೇವಿ

ಕೃತಿಲತಾ ತಮ್ಮ ಉಳಿದ ಜೀವನವನ್ನು ಒಂಟಿಯಾಗಿ ಕಳೆಯಲು ಮನಸ್ಸು ಮಾಡಿದ್ದರು. ಆದರೆ, ಕೃತಿ ಅವರ ಅತ್ತೆ ಯಮುನಾ ದೇವಿ ಅವರು ತಮ್ಮ ಸೊಸೆಗೆ ಮರುಮದುವೆ ಮಾಡಲು ನಿರ್ಧರಿಸಿದ್ದರು. ಯಮುನಾ ದೇವಿಗೆ ಕೃತಿಯನ್ನು ಮನವೊಲಿಸುವುದು ಮತ್ತು ನಂತರ ಸಮಾಜವು ಈ ವಿಧವಾ ವಿವಾಹವನ್ನು ಒಪ್ಪಿಕೊಳ್ಳುವಂತೆ ಮಾಡುವುದು ದೊಡ್ಡ ಸವಾಲಾಗಿತ್ತು. ಆದರೆ ಹೇಗೋ ಕೃತಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದ ಅತ್ತೆ ಯಮುನಾ ಅವರು ತಾಯಿಯ ಸ್ಥಾನದಲ್ಲಿ ನಿಂತು ಮರು ಮದುವೆ ಮಾಡಿಸಿದರು.

ಓದಿ:ವರ ಗಡ್ಡ ಬಿಡುವಂತಿಲ್ಲ, ಅದ್ಧೂರಿ ಮದುವೆ ಮಾಡಂಗಿಲ್ಲ.. ವಿವಾಹಕ್ಕೆ ನಿಯಮ ರೂಪಿಸಿದ ಸಮುದಾಯಗಳು

ಎರಡನೇ ಮದುವೆಯಿಂದ ಖುಷಿಯಾಗಿದ್ದೇನೆ. ಎರಡನೇ ಮದುವೆಗೆ ನನ್ನ ಅತ್ತೆ ಕೇಳಿದಾಗ ನಾನು ಮೊದಲು ಸಿದ್ಧಳಾಗಿರಲಿಲ್ಲ. ಸಮಯ ಹಿಡಿಯಿತು. ಆದರೆ ನಂತರ ನಮ್ಮ ಅತ್ತೆಯ ಒತ್ತಾಯದ ಮೇರೆಗೆ ನಾನು ಎರಡನೇ ಮದುವೆಗೆ ಒಪ್ಪಿಕೊಂಡೆ ಎಂದು ವಧು ಕೃತಿಲತಾ ಸಿನ್ಹಾ ತಮ್ಮ ಮನದಾಳದ ಮಾತನ್ನು ಹೇಳಿದರು.

ವಧು ಕೃತಿಲತಾ

ನಾನು ಭಿಲಾಯಿ ಸ್ಟೀಲ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತೇನೆ. ನನ್ನ ಮೊದಲ ಹೆಂಡತಿ ತೀವ್ರ ಅನಾರೋಗ್ಯದಿಂದ ನಿಧನರಾದರು. ಒಂಟಿ ವ್ಯಕ್ತಿಯ ಜೀವನವು ನೋವಿನಿಂದ ಕೂಡಿದೆ. ವಯಸ್ಸಾದಂತೆ ಸಂಗಾತಿಯ ಅಗತ್ಯವಿರುತ್ತದೆ. ಅದಕ್ಕಾಗಿಯೇ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ವರ ದುರ್ಗೇಶ್ ಸಿನ್ಹಾ ಹೇಳಿದ್ದಾರೆ.

ನನ್ನ ಮಗ ಈ ಜಗತ್ತಿನಲ್ಲಿ ಇಲ್ಲ. ಆತ ಇಹಲೋಕ ತ್ಯಜಿಸಿದ್ದಾನೆ. ನನ್ನ ಸೊಸೆಗೆ ಐದು ವರ್ಷದ ಮಗುವಿದೆ. ಮಗುವಿಗೆ ಉಜ್ವಲ ಭವಿಷ್ಯ ನೀಡಬೇಕಾದ ಕರ್ತವ್ಯ ಸಹ. ಆದ್ದರಿಂದ ನಾನು ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಯಮುನಾ ದೇವಿ ಸಿನ್ಹಾ ಅವರು ಹೇಳಿದರು. ಯಮುನಾ ದೇವಿಯವರ ಈ ಆದರ್ಶ ವಿಚಾರ ಮತ್ತು ನಡೆ ಸಮಾಜಕ್ಕೆ ಮಾದರಿಯಾಗಬಲ್ಲುದು. ವಿಧವೆ ಮತ್ತು ವಿಧುರನಿಗೆ ಮದುವೆ ಮಾಡಿಸುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿರುವ ಅವರಿಗೆ ಸಲಾಂ ಹೇಳೋಣ..

ABOUT THE AUTHOR

...view details