ಯದಾದ್ರಿ ಭುವವನಗಿರಿ(ತೆಲಂಗಾಣ):ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು, ನಂತರ ತಾಯಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಯದಾದ್ರಿ ಭುವನಗಿರಿಯ ಜಿಲ್ಲೆಯ ಚೋಟುಪ್ಪಲ್ ಎಂಬಲ್ಲಿ ನಡೆದಿದೆ
ತೋರುಪುನುರಿ ವೆಂಕಟೇಶ್ ಮತ್ತು ರಾಣಿ ಎಂಬ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಇಬ್ಬರೂ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕೊರೊನಾ ಸಾಂಕ್ರಾಮಿಕದ ವೇಳೆ ಯಾವುದೇ ಕೆಲಸವಿಲ್ಲದ ಕಾರಣದಿಂದ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಕಠಿಣವಾಗಿತ್ತು. ಇದರೊಂದಿಗೆ ವೆಂಕಟೇಶ್ ಮದ್ಯ ವ್ಯಸನಿಯಾಗಿದ್ದು, ಮನೆಯ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡುವಂತೆ ಮಾಡಿತ್ತು.