ಫಿರೋಜಾಬಾದ್(ಉತ್ತರ ಪ್ರದೇಶ): ಹೆರಿಗೆಗೋಸ್ಕರ ಗಂಡನ ಮನೆಯಿಂದ ತವರು ಮನೆಗೆ ಹೋಗುತ್ತಿದ್ದಾಗ ಗರ್ಭಿಣಿಗೆ ಟ್ರಕ್ವೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಈ ಘಟನೆ ನಡೆದಿದ್ದು, ಪ್ರಾಣ ಬಿಡುವುದಕ್ಕೂ ಮುಂಚೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಫಿರೋಜಾಬಾದ್ನ ನರಖಿ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ತಾರಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.
ಆಗ್ರಾ ಜಿಲ್ಲೆಯ ಧನೌಲಾ ಗ್ರಾಮದ ನಿವಾಸಿ ರಾಮು ತಮ್ಮ ಗರ್ಭಿಣಿ ಪತ್ನಿ ಕಾಮಿನಿ ಜೊತೆ ಅತ್ತೆ ಮನೆಗೆ ಬೈಕ್ ಮೇಲೆ ಹೋಗುತ್ತಿದ್ದರು. ಬರ್ತಾರಾ ಗ್ರಾಮದ ಬಳಿ ಬರುತ್ತಿದ್ದಂತೆ ಟ್ರಕ್ವೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಮಿನಿ ರಸ್ತೆ ಮಧ್ಯೆ ಬಿದ್ದಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಟ್ರಕ್ ಆಕೆಗೆ ಹಿಂದಿನಿಂದ ಗುದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಕಾಮಿನಿ ಸಾಯುವುದಕ್ಕೂ ಮುಂಚಿತವಾಗಿ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.