ನವದೆಹಲಿ: ಮೃಗಾಲಯದಲ್ಲಿ ತಾಯಿ ಆನೆಯೊಂದು ಮಲಗಿದ್ದ ತನ್ನ ಕರುವನ್ನು ಎಬ್ಬಿಸಲು ಸಹಾಯ ಕೋರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಎಂಬ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, 12.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ತಾಯಿ ಆನೆಯು ತನ್ನ ಮರಿ ಆನೆ ಬಳಿ ಬರುತ್ತದೆ. ಆದರೆ, ಹುಲ್ಲಿನಲ್ಲಿ ಮಲಗಿದ್ದ ಮರಿ ಆನೆ, ತಾಯಿ ಬಂದರೂ ಎದ್ದೇಳುವುದಿಲ್ಲ. ತನ್ನ ಮರಿಯನ್ನು ಎಬ್ಬಿಸಲು ನಿರಂತರವಾಗಿ ಪ್ರಯತ್ನಿಸಿದರೂ ಅದು ಎಚ್ಚರವಾಗಲ್ಲ. ಹೀಗಾಗಿ ತಾಯಿ ಆನೆ ಕೊನೆಗೆ ಮೃಗಾಲಯದ ಸಿಬ್ಬಂದಿ ಬಳಿಗೆ ತೆರಳುವುದು ವಿಡಿಯೋದಲ್ಲಿ ಕಾಣಬಹುದು.