ಅಶೋಕನಗರ (ಮಧ್ಯಪ್ರದೇಶ):ಮದ್ಯಪಾನಕ್ಕೆ ಹಣ ನೀಡಲಿಲ್ಲ ಎಂದು ಹೆತ್ತಮ್ಮನನ್ನೇ ಪುತ್ರ ಥಳಿಸಿರುವ ಘಟನೆ ಇಲ್ಲಿನ ಇಸಾಗಢ್ನಲ್ಲಿ ನಡೆದಿದೆ. ಮದ್ಯ ವ್ಯಸನಿಯಾಗಿದ್ದ ಮಗ ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದ. ಈ ವೇಳೆ ತಾಯಿ ಉಳಿಸಿರುವ ಹಣವನ್ನ ಮದ್ಯಪಾನ ಮಾಡಲು ಕೇಳಿದ್ದಾನೆ.
ಮದ್ಯಪಾನಕ್ಕೆ ಹಣ ನೀಡುವಂತೆ ಹೆತ್ತಮ್ಮನ ಥಳಿಸಿದ ಪಾಪಿ ಮಗ - ವೈರಲ್ ವಿಡಿಯೋ
ಪಾಪಿ ಪುತ್ರನ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
ಮದ್ಯಪಾನಕ್ಕೆ ಹಣ ನೀಡುವಂತೆ ಹೆತ್ತಮ್ಮನ ಥಳಿಸಿದ ಪಾಪಿ ಮಗ
ಆದರೆ, ಹಣ ನೀಡಲು ತಾಯಿ ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಮಗ ಮನಬಂದಂತೆ ಥಳಿಸಿದ್ದಾನೆ. ಜೊತೆಗೆ ಹಣ ನೀಡುವಂತೆ ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪಾಪಿ ಪುತ್ರನ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.