ಕರ್ನಾಟಕ

karnataka

ETV Bharat / bharat

ಸಾರ್ವಜನಿಕ ಶೌಚಾಲಯದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ - ghaziabad latest news

ಗಾಜಿಯಾಬಾದ್​ನ ಸಾರ್ವಜನಿಕ ಶೌಚಾಲಯದಲ್ಲಿ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ತಾಯಿ ಮಕ್ಕಳನ್ನು ನಿಗಾದಲ್ಲಿ ಇರಿಸಲಾಗಿದೆ.

ghaziabad
ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

By

Published : Mar 17, 2021, 11:18 AM IST

ನವದೆಹಲಿ: ಮಹಿಳೆಯೊಬ್ಬರು ಗಾಜಿಯಾಬಾದ್​ನ ಸಾರ್ವಜನಿಕ ಶೌಚಾಲಯದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಬುಲಂದ್‌ಶಹರ್ ಮೂಲದ ಮಹಿಳೆ ತನ್ನ ಪತಿ ದರ್ಶನ್ ಸಿಂಗ್ ಜೊತೆ ಗಾಜಿಯಾಬಾದ್​ಗೆ ಬಂದಿದ್ದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಹೆರಿಗೆ ನೋವು ಕಾಣಿಸಿಕೊಂಡಾಗ ಪಕ್ಕದಲ್ಲೇ ಇದ್ದ ಸಾರ್ವಜನಿಕ ಶೌಚಾಲಯಕ್ಕೆ ಪತಿ ಕರೆದುಕೊಂಡು ಹೋಗಿದ್ದಾನೆ. ಇನ್ನು ವಿಷಯ ಅರಿತ ಪೊಲೀಸ್​ ಕಾನ್​ಸ್ಟೇಬಲ್​ಗಳಾದ ಇಮ್ರಾನ್ ಮತ್ತು ಗುಲ್ ಮೊಹಮ್ಮದ್ ಅವರು ಸ್ಥಳಕ್ಕಾಗಮಿಸಿ ಮಹಿಳೆ ಹೆರಿಗೆ ಸಂದರ್ಭದಲ್ಲಿ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮಹಿಳೆಯು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.

ಹೆರಿಗೆ ಬಳಿಕ ತಾಯಿ ಮತ್ತು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಸಂಬಂಧ ಮಾತನಾಡಿದ ದರ್ಶನ್ ಸಿಂಗ್​, "ತಾಯಿ-ಮಕ್ಕಳ ಪ್ರಾಣ ಉಳಿಸಿದ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದರು.

ಇನ್ನು 24 ವಾರಗಳ ಮುಂಚೆಯೇ ಮಹಿಳೆಗೆ ಹೆರಿಗೆಯಾಗಿದೆ. ಹೀಗಾಗಿ ತಾಯಿ- ಮಕ್ಕಳನ್ನು ನಿಗಾದಲ್ಲಿ ಇಡಲಾಗಿದೆ ಎಂದು ಡಾ. ಗೌರವ್ ಮಾಹಿತಿ ನೀಡಿದರು.

ABOUT THE AUTHOR

...view details