ರಂಗಾರೆಡ್ಡಿ( ತೆಲಂಗಾಣ):ಹತ್ತೆ ಮಗವಿಗೆ ಅಮಾನುಷವಾಗಿ ಚಿತ್ರಹಿಂಸೆ ನೀಡಿರುವ ತಾಯಿಯೊಬ್ಬಳು ಬ್ಲೇಡ್ನಿಂದ ಆತನ ಎರಡು ತೊಡೆ ಕತ್ತರಿಸಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಬ್ಲೇಡ್ನಿಂದ ತೊಡೆ ಕತ್ತರಿಸಿದ ಹೆತ್ತ ತಾಯಿ ಕೆಟ್ಟ ಅಭ್ಯಾಸಗಳೊಂದಿಗೆ ಮಗು ಸುತ್ತಾಡುತ್ತಿದ್ದಾನೆ ಎಂದು ಆರೋಪಿಸಿರುವ ತಾಯಿ, ಆತನ ಮನಸು ಬದಲಾವಣೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಓದಿ: ಪ್ರೇಯಸಿಯ ಮೇಲಿತ್ತು ಪ್ರೀತಿ: ಕಟ್ಕೊಂಡವಳ ಕೊಲೆಗೈದ ಪತಿಮಹಾಶಯ
ಬಾಲಕನ ತೊಡೆ ಕತ್ತರಿಸುತ್ತಿದ್ದಂತೆ ಆತ ಕಿರುಚಾಟ ನಡೆಸಿದ್ದು, ಪಕ್ಕದ ಮನೆಯವರು ಸ್ಥಳಕ್ಕಾಗಮಿಸಿ ಬಾಲಕನ ರಕ್ಷಣೆ ಮಾಡಿದ್ದಾರೆ. ಜತೆಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿ, ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಕೃತ್ಯವೆಸಗಿರುವ ತಾಯಿ ಚಂದ್ರಕಲಾ, ಆತ ಬಾಲ್ಯದಿಂದಲೂ ಕೆಟ್ಟ ಅಭ್ಯಾಸ ಹೊಂದಿದ್ದು, ಅನೇಕ ಸಲ ಬುದ್ದಿವಾದ ಹೇಳಿದ್ರೂ ಕೇಳಿಲ್ಲ ಎಂದಿದ್ದಾಳೆ. ಅದೇ ಕಾರಣಕ್ಕಾಗಿ ಈ ಕೃತ್ಯವೆಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ.