ಬಕ್ಸಾರ್(ಬಿಹಾರ):ಬಿಹಾರದ ಬಕ್ಸಾರ್ನಲ್ಲಿ ತಾಯಿಯೋರ್ವಳು ಮೂವರು ಮಕ್ಕಳೊಂದಿಗೆ ಸಾವಿಗೆ ಶರಣಾಗಿರುವ ಘಟನೆ ನಡೆದಿದ್ದು, ರೈಲಿನಿಂದ ಕೆಳಕ್ಕೆ ಬಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಬಕ್ಸಾರ್ ರೈಲ್ವೆ ಸ್ಟೇಷನ್ ಪೊಲೀಸ್ ಅಧಿಕಾರಿ ರಾಮಶಿಶ್ ಪ್ರಸಾದ್ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮೃತರಲ್ಲಿ ಆರು ತಿಂಗಳ ಮಗು ಸಹ ಸೇರಿದ್ದು, ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ ಹಾಗೂ ಮಕ್ಕಳ ಗುರುತು ಇಲ್ಲಿಯವರೆಗೆ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಮೂವರು ಮಕ್ಕಳೊಂದಿಗೆ ಡುಮ್ರಾನ್ನಿಂದ ಪ್ರಯಾಣ ಬೆಳೆಸಿದ್ದ ಮಹಿಳೆ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಜಂಕ್ಷನ್ ರೈಲು ನಿಲ್ದಾಣದ ಡುಮ್ರಾನ್ ರೈಲು ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಈ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಬಕ್ಸಾರ್ ರೈಲ್ವೆ ಸ್ಟೇಷನ್ ಅಧಿಕಾರಿ ರಾಮಶಿಶ್, 35 ವರ್ಷದ ಮಹಿಳೆ ಜೊತೆ 4 ಮತ್ತು 6 ವರ್ಷದ ಹೆಣ್ಣು ಮಕ್ಕಳು ಸಾವನ್ನಪ್ಪಿದ್ದು, ಜೊತೆಗೆ 6 ತಿಂಗಳ ಗಂಡು ಮಗು ಕೂಡ ಸಾವಿಗೀಡಾಗಿದೆ. ಇವರ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಗುರುತು ಲಭ್ಯವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮಿಂಚಿದ ನಾರಿಪಡೆ.. BSF ಮಹಿಳಾ ತಂಡದಿಂದ ರೋಮಾಂಚನಕಾರಿ ಸ್ಟಂಟ್!